ಬಂತು ನೋಡಿ ಕೋಳಿಯ ಹೊಸ ತಳಿ; ಇವು ವರ್ಷಕ್ಕೆ 200 ಮೊಟ್ಟೆಗಳನ್ನು ಇಡುತ್ತವೆಯಂತೆ| Egg

egg
Published on

Egg| ಸಾಮಾನ್ಯವಾಗಿ ಒಂದು ಕೋಳಿ ಎಷ್ಟು ಮೊಟ್ಟೆ ಇಡುತ್ತದೆ ಎಂದು ದಿನವೂ ಮೊಟ್ಟೆ ತಿನ್ನುವವರಿಗೆ ಸರಿಯಾಗಿ ಗೊತ್ತಿರುವುದಿಲ್ಲ. ಪೌಲ್ಟ್ರಿ ವಿಜ್ಞಾನಿ ಡಾ. ಎಯು ಕಿದ್ವಾಯಿ ಪ್ರಕಾರ ಪೌಲ್ಟ್ರಿಯಲ್ಲಿ ಇರುವ ಕೋಳಿ ಒಂದು ವರ್ಷಕ್ಕೆ 305 ರಿಂದ 310 ಮೊಟ್ಟೆಯನ್ನು ಇಡುತ್ತದೆ. ಇನ್ನೂ ದೇಸಿ ಮನೆಯ ಕೋಳಿ 150 ರಿಂದ 200 ಮೊಟ್ಟೆಗಳನ್ನು ವಾರ್ಷಿಕವಾಗಿ ಇಡುತ್ತದೆ ಎಂದು ಅಂದಾಜಿಸಲಾಗಿದೆ. ಆದರೆ ಇದೀಗ ವರ್ಷಕ್ಕೆ 200 ಮೊಟ್ಟೆಗಳನ್ನು ಇಡುವ ಹೊಸ ತಳಿಯ ಕೋಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಪಾಕಿಸ್ತಾನದ ಕೋಳಿ ಸಾಕಣೆ ಉದ್ಯಮಕ್ಕೆ ಗಮನಾರ್ಹ ಪ್ರಗತಿಯಲ್ಲಿ ಯುನಿ-ಗೋಲ್ಡ್ ಎಂದು ಹೆಸರಿಸಲಾದ ಹೊಸ ಕೋಳಿ ತಳಿಯನ್ನು ಫೈಸಲಾಬಾದ್ ಕೃಷಿ ವಿಶ್ವವಿದ್ಯಾಲಯದ (UAF) ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. 365 ದಿನಗಳಲ್ಲಿ 200 ದಿನಗಳಲ್ಲಿ 200 ಮೊಟ್ಟೆಗಳನ್ನು ಇಡುವ ಸಾಮರ್ಥ್ಯವನ್ನು ಈ ಹೊಸ ತಳಿ ಹೊಂದಿದೆಯಂತೆ. ಪಾಕಿಸ್ತಾನದ ಗ್ರಾಮೀಣ ಪರಿಸರದಲ್ಲಿ ಅಭಿವೃದ್ಧಿ ಹೊಂದಲು ಮತ್ತು ತೀವ್ರತರವಾದ ತಾಪಮಾನವನ್ನು ತಡೆದುಕೊಳ್ಳಲು ಇದನ್ನು ವಿನ್ಯಾಸಗೊಳಿಸಲಾಗಿದೆ ಎಂದು ಹೇಳಲಾಗಿದೆ.

Eggs Health

ಪಾಕಿಸ್ತಾನದ ಒಟ್ಟು ಮೊಟ್ಟೆ ಉತ್ಪಾದನೆಯಲ್ಲಿ ಶೇ. 36 ರಷ್ಟು ಕೊಡುಗೆ ನೀಡುವ ಗ್ರಾಮೀಣ ಕೋಳಿ ಸಾಕಣೆ, ಮಹಿಳೆಯರ ಸಬಲೀಕರಣ ಖಾತ್ರಿಪಡಿಸುವಲ್ಲಿ ಇದು ನಿರ್ಣಾಯಕ ಪಾತ್ರ ವಹಿಸುತ್ತದೆ.

ಯುನಿ-ಗೋಲ್ಡ್‌ನ ವಿಶಿಷ್ಟ ವೈಶಿಷ್ಟ್ಯವೆಂದರೆ, ಕಡಿಮೆ ಆಹಾರದ ಅಗತ್ಯವಿದ್ದರೂ ದೇಸಿ ಕೋಳಿಗಿಂತ ಮೂರು ಪಟ್ಟು ಹೆಚ್ಚು ಮೊಟ್ಟೆಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು ದಕ್ಷತೆ ಮತ್ತು ಸುಸ್ಥಿರತೆಯನ್ನು ಬಯಸುವ ಸಣ್ಣ ಪ್ರಮಾಣದ ರೈತರಿಗೆ ಆಕರ್ಷಕ ಆಯ್ಕೆಯಾಗಿದೆ.

(ಏಜೆನ್ಸೀಸ್)

ಸ್ಥಳೀಯ ಮೊಟ್ಟೆ ಉತ್ಪಾದನೆಯನ್ನು ಹೆಚ್ಚಿಸುವ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಈ ತಳಿಯನ್ನು ದೇಶಾದ್ಯಂತ ವಿತರಿಸುವ ಯೋಜನೆಯನ್ನು ವಿಶ್ವವಿದ್ಯಾಲಯ ಘೋಷಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net