ಮಹಾರಾಷ್ಟ್ರದ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರಿಗೆ ಶೇ.5 ಮೀಸಲಾತಿ: ಉದ್ಯೋಗದಲ್ಲೂ ಮೀಸಲಾತಿ ನೀಡುವ ಪ್ಲ್ಯಾನ್​

nawab malik
Published on

ಮುಂಬೈ: ಮಹಾರಾಷ್ಟ್ರದಲ್ಲಿ ಮುಂಬರುವ ಶೈಕ್ಷಣಿಕೆ ವರ್ಷದಿಂದ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರಿಗೆ ಶೇ.5 ಮೀಸಲಾತಿ ನೀಡುವ ಯೋಜನೆಯನ್ನು ಸರ್ಕಾರ ಹಾಕಿಕೊಂಡಿದೆ.

ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರಿಗೆ ಶೇ.5 ಮೀಸಲಾತಿ ನೀಡುವ ಮಸೂದೆಯನ್ನು ಮಹಾ ವಿಕಾಸ್​ ಅಘಾಡಿ ಸರ್ಕಾರವು ಪ್ರಸ್ತುತ ಬಜೆಟ್​ ಅಧಿವೇಶನದಲ್ಲಿ ಮಂಡಿಸಲಿದೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ನವಾಬ್​ ಮಲಿಕ್​ ತಿಳಿಸಿದ್ದಾರೆ. ಅದರ ಜತೆಯಲ್ಲಿ ಉದ್ಯೋಗಗಳಲ್ಲಿಯೂ ಮೀಸಲಾತಿ ನೀಡುವ ಯೋಜನೆಯಿದ್ದು ಅದಕ್ಕೆ ಸರ್ಕಾರವು ಕಾನೂನು ಸಲಹೆ ಪಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್​, ಶಿವಸೇನೆ ಮತ್ತು ಎನ್​ಸಿಪಿ ಪಕ್ಷಗಳ ಮೈತ್ರಿ ಸರ್ಕಾರ ಆಡಳಿತದಲ್ಲಿದ್ದು, ಮಾರ್ಚ್​ 6ರಂದು 2020-21ನೇ ಸಾಲಿನ ವಾರ್ಷಿಕ ಬಜೆಟ್​ ಮಂಡನೆ ಮಾಡಲಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net