ಮಾರ್ಚ್​ನಲ್ಲಿ ನಡೆಯಬೇಕಿದ್ದ NEET PG ಪರೀಕ್ಷೆ ಮುಂದೂಡಿಕೆ

Doctor
Published on

ನವದೆಹಲಿ: 2022ರ ಮಾರ್ಚ್​ 12ರಂದು ನಡೆಯಬೇಕಿದ್ದ ನೀಟ್​ ಪಿಜಿ ಪರೀಕ್ಷೆ(NEET PG Exam)ಯನ್ನು ಮುಂದೂಡಲಾಗಿದೆ.

ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಟ್ವೀಟ್​ ಮಾಡಿದ್ದು, ಮಾರ್ಚ್​ 12ರಂದು ನಡೆಯಬೇಕಿದ್ದ ನೀಟ್​ ಪಿಜಿ ಪರೀಕ್ಷೆಯನ್ನು 6ರಿಂದ 8 ವಾರಗಳ ವರೆಗೆ ಮುಂದೂಡಲಾಗಿದೆ. ಶೀಘ್ರವೇ ಪರೀಕ್ಷೆಯ ದಿನಾಂಕ ಪ್ರಕಟಿಸಲಾಗುವುದು. ನೀಟ್​ ಪಿಜಿ 2021ರ ಕೌನ್ಸೆಲಿಂಗ್​ ಇರುವ ಕಾರಣ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ತಿಳಿಸಿದೆ.

2021ರ ನೀಟ್​ ಪಿಜಿ ಕೌನ್ಸೆಲಿಂಗ್​ ಮತ್ತು ನೀಟ್​ ಪಿಜಿ ಪರೀಕ್ಷೆ ದಿನಾಂಕ ಸಮೀಪದಲ್ಲೇ ಇದ್ದಿದ್ದರಿಂದ ಪರೀಕ್ಷೆಯನ್ನ ಮುಂದೂಡಬೇಕು ಎಂದು ಕೋರಿ ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್​ನ ಮೆಟ್ಟಿಲೇರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net