ಸಪ್ತಪದಿ ತುಳಿದ ನಯನತಾರಾ-ವಿಘ್ನೇಶ್​: ಫೋಟೋ ರಿವೀಲ್​, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ...

nayanatara
Published on

ಚೆನ್ನೈ: ದಕ್ಷಿಣ ಭಾರತದ ಬಹುಬೇಡಿಕೆಯ ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್​ ಶಿವನ್ ಗುರುವಾರ ಹಿಂದು ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದ್ವೆ ಸಂಭ್ರಮದ ಫೋಟೋಗಳು ರಿವೀಲ್​ ಆಗಿದ್ದು, ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಮಹಾಬಲಿಪುರಂನ ರೆಸಾರ್ಟ್​ನಲ್ಲಿ ನಡೆದ ನಯನತಾರಾ ಅವರ ಮದುವೆಯಲ್ಲಿ ಶಾರುಖ್ ಖಾನ್, ರಜಿನಿಕಾಂತ್, ವಿಜಯ್ ಸೇತುಪತಿ, ತಲಾ ಅಜಿತ್, ಸೂರ್ಯ ಸೇರಿದಂತೆ ಅನೇಕ ಗಣ್ಯರು, ಕುಟುಂಬದ ಆಪ್ತರು ಮತ್ತು ಸ್ನೇಹಿತರು ಪಾಲ್ಗೊಂಡಿದ್ದರು.

ಈ ಮದುವೆಗೆ ಮಾಧ್ಯಮದವರಿಗೆ ನಿರ್ಬಂಧ ಹೇರಲಾಗಿತ್ತು. ಈ ಮದುವೆಯ ದೃಶ್ಯ ಪ್ರಸಾರದ ಹಕ್ಕನ್ನ 10 ಕೋಟಿ ರೂ.ಗೆ ಈ ಜೋಡಿ ಸೇಲ್ ಮಾಡಿದೆ ಎನ್ನಲಾಗಿದೆ. ನವಜೋಡಿಯ ಫೋಟೋ ವೈರಲ್​ ಆಗಿದ್ದು, ನೆಟ್ಟಿಗರು ಮತ್ತು ಅಭಿಮಾನಿಗಳು ಪ್ರಭುದೇವ ಮತ್ತು ಸಿಂಬು ಜೊತೆಗಿನ ಅಫೇರ್‌ನಿಂದ ಸುದ್ದಿಯಾಗಿದ್ದ ನಯನತಾರಾ, ತನಗಿಂತ ಒಂದು ವರ್ಷ ಚಿಕ್ಕವರಾದ ವಿಘ್ನೇಶ್​ರನ್ನು ಕೈಹಿಡಿದಿದ್ದಾರೆ. ವಿಘ್ನೇಶ್​ ಮತ್ತು ನಯನತಾರಾ ಅವರ ಮದುವೆ ಮೊದಲಿಗೆ ತಿರುಪತಿ ತಿರುಮಲ ದೇವಸ್ಥಾನದಲ್ಲಿ ನಡೆಯಲಿದೆ ಎಂದು ಹೇಳಲಾಗಿತ್ತು. ಕೊನೇ ಹಂತದಲ್ಲಿ ಸ್ಥಳ ಬದಲಾವಣೆ ಆಗಿದ್ದು, ತಿರುಪತಿ ಬದಲು ಮಹಾಬಲಿಪುರಂನ ರೆಸಾರ್ಟ್​ನಲ್ಲಿ ಮದುವೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net