_1787334787287.webp?w=480&auto=format%2Ccompress&fit=max)
_1787334787287.webp?w=480&auto=format%2Ccompress&fit=max)
(ಲೇಖಕರು ವಿಜಯವಾಣಿ ಸಹಾಯಕ ಸಂಪಾದಕರು)
ರಾಜ್ಯದ ಸಾಮಾಜಿಕ ಅರಣ್ಯಗಳನ್ನು ನೈಸರ್ಗಿಕ ಶ್ವಾಸತಾಣ ಎಂದು ಪರಿಗಣಿಸಿ ಪಂಚಾಯತ್ ರಾಜ್ ಇಲಾಖೆ ಶೇ. 20 ಅನುದಾನವನ್ನು ಸಾಮಾಜಿಕ ಅರಣ್ಯಕ್ಕೆ ಮೀಸಲಿಡಬೇಕು ಹಾಗೂ ಸಾಮಾಜಿಕ ಅರಣ್ಯ ಸಂರಕ್ಷಣೆ ನಿರ್ವಹಣೆ ಮತ್ತು ಸಮಗ್ರ, ಸುಸ್ಥಿರ ಅಭಿವೃದ್ಧಿಗೆ ವಿಶೇಷ ಯೋಜನೆ ಪ್ರಕಟಿಸಬೇಕು ಎಂದು ಗ್ರಾಮೀಣ ಅಭಿವೃದ್ಧಿ, ಪರಿಸರ ಕ್ಷೇತ್ರದ ಸಂಘ ಸಂಸ್ಥೆಗಳ ಪರವಾಗಿ ಪರಿಸರಪ್ರೇಮಿಗಳು ಮಾಡಿರುವ ಒತ್ತಾಯವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಅರಣ್ಯ ಸಂರಕ್ಷಿಸುವ ವಾಗ್ದಾನ ಮಾಡಿದ್ದಾರೆ. ಆದ್ದರಿಂದಲೇ ಮನವಿಯ ಸಂಬಂಧ ನಿಯಮಾನುಸಾರ ಏನು ಕ್ರಮ ಕೈಗೊಳ್ಳಬಹುದು ಎಂಬ ವರದಿಯನ್ನು ಅತಿಶೀಘ್ರ ನೀಡುವಂತೆ ಇಲಾಖೆ ಕಾರ್ಯದರ್ಶಿಗೆ ಸೂಚಿಸಿದ್ದಾರೆ. ಈ ಬೆಳವಣಿಗೆಯೊಂದಿಗೆ ಸಾಮಾಜಿಕ ಅರಣ್ಯ ಕಾಪಾಡುವ ಕಾಳಜಿ ಮತ್ತೊಮ್ಮೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಸಾಮಾಜಿಕ ಅರಣ್ಯದಲ್ಲಿ ಒಂದು ಸುತ್ತು...