ಮೈಸೂರಿನಲ್ಲಿ ಮರುಕಳಿಸಿದ ಗತವೈಭವ: ಮನಸೆಳೆಯುತ್ತಿವೆ ಕಲಾ ತಂಡಗಳು, ಸ್ತಬ್ಧಚಿತ್ರಗಳು

New Project(5)
Published on

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗತವೈಭವ ಮರುಕಳಿಸಿದ್ದು, ಲಕ್ಷಾಂತರ ಜನ ಮೈಸೂರು ದಸರಾವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಇನ್ನು ಕೆಲವೇ ಕ್ಷಣದಲ್ಲಿ ಜಂಬೂ ಸವಾರಿ ಹೊರಡಲಿದ್ದು, 70ಕ್ಕೂ ಹೆಚ್ಚು ಕಲಾತಂಡಗಳು ಮೆರುಗು ನೀಡಿವೆ. ಸ್ತಬ್ಧಚಿತ್ರಗಳೂ ಮನಸೆಳೆಯುತ್ತಿವೆ.

ಸಾಂಸ್ಕೃತಿಕ ಸಿರಿ ಮತ್ತು ಧಾರ್ಮಿಕ ಐಸಿರಿಯ ಸಮ್ಮಿಲನವಾದ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾದಲ್ಲಿ ಎತ್ತ ಕಣ್ಣುಹಾಯಿಸಿದರೂ ಒಂದಲ್ಲ ಒಂದು ದೃಶ್ಯ ಕಣ್ಮನ ಸೆಳೆಯುತ್ತಲೇ ಇವೆ. ಕೋವಿಡ್ ಹಿನ್ನೆಲೆ ಕಳೆದ 2 ವರ್ಷ ಸರಳವಾಗಿ ನಡೆದಿದ್ದ ಉತ್ಸವದಲ್ಲಿ ಈ ಬಾರಿ ಸಡಗರ ಮೇಳೈಸಿದೆ. ಅರಮನೆ ಸುತ್ತ ಜನಸಾಗರವೇ ಇದೆ.

ಅರಮನೆ ಮುಂಭಾಗ ಕಲಾ ತಂಡಗಳ ವೈಭೋಗ ಅನಾವರಣಗೊಂಡಿದೆ. ವೀರಗಾಸೆ, ತಮಟೆ, ಕಂಸಾಳೆ, ಪಟದ ಕುಣಿತ, ವಾದ್ಯ, ಕೊಂಬು ಕಹಳೆ... ಸೇರಿದಂತೆ 70ಕ್ಕೂ ಹೆಚ್ಚು ಕಲಾತಂಡಗಳ ಮೆರವಣಿಗೆ ಆಕರ್ಷಣೆಯಾಗಿವೆ.

ಇನ್ನು ರಾಜ್ಯದ ಎಲ್ಲ ಜಿಲ್ಲೆಗಳಿಂದ ಸ್ತಬ್ಧಚಿತ್ರಗಳು ಬಂದಿದ್ದು, ದಸರಾಗೆ ಮೆರುಗು ನೀಡಿವೆ. ಮೈಸೂರಿನಿಂದ 106 ವರ್ಷಗಳ ಇತಿಹಾಸವಿರುವ ಮೈಸೂರು ವಿಶ್ವವಿದ್ಯಾಲಯ, ಬಾಗಲಕೋಟೆ- ಮುಧೋಳ ನಾಯಿ, ಇಳಕಲ್​ ಸೀರೆ. ಹಾಸನ-ಶ್ರವಣಬೆಳಗೊಳ ಗೊಮ್ಮಟೇಶ್ವರ. ಚಾಮರಾಜನಗರ-ವನ್ಯಧಾಮ, ಮಲೆಮಹದೇಶ್ವರ ವಿಗ್ರಹ, ಪುನೀತ್​ ಪ್ರತಿಮೆ. ಬೆಂಗಳೂರು-ಬಸವನಗುಡಿಯ ಕಡಲೆಕಾಯಿ ಪರಿಷೆ, ಚಿಕ್ಕಬಳ್ಳಾಪುರ- ನಂದಿಬೆಟ್ಟ, ಭೋಗನಂದೀಶ್ವರ ದೇವಸ್ಥಾನ, ಬಳ್ಳಾರಿ-ದುರ್ಗಮ್ಮ ದೇವಸ್ಥಾನ, ಚಿತ್ರದುರ್ಗ-ವಾಣಿ ವಿಲಾಸ ಜಲಾಶಯ, ಒನಕೆ ಓಬವ್ವ... ಸ್ತಬ್ಧಚಿತ್ರಗಳ ಪ್ರದರ್ಶನ ಅರಮನೆ ಆವರಣದಲ್ಲಿದ್ದು, ಮನಸೆಳೆಯುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net