ಬೆಂಗಳೂರಿನಲ್ಲಿ ನಿಗೂಢ ಸ್ಫೋಟ: ಇಬ್ಬರು ಕೂಲಿ ಕಾರ್ಮಿಕರ ಸ್ಥಿತಿ ಗಂಭೀರ

spota
Published on

ಬೆಂಗಳೂರು: ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ನಿಗೂಢ ಸ್ಫೋಟ ಸಂಭವಿಸಿದ್ದು, ಮೂವರು ಕೂಲಿ ಕಾರ್ಮಿಕರಿಗೆ ಗಂಭೀರ ಗಾಯವಾಗಿದೆ. ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಕಾರ್ಮಿಕರು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

ಶ್ರೀನಿವಾಸ್, ಮಣಿಕಂಠ, ಶಶಿಕುಮಾರ್ ಗಾಯಾಳುಗಳು ಎಂದು ತಿಳಿದುಬಂದಿದೆ. ಜೂನ್ 6 ರಂದು ರಾತ್ರಿ 11:30 ರ ವೇಳೆಗೆ ಸ್ಫೋಟ ಸಂಭವಿಸಿದ್ದು, ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ನಿರ್ಮಾಣ ಹಂತದ ಕಟ್ಟಡ ಕಾಮಗಾರಿ ವೇಳೆ ಮೇಲ್ಕಂಡ ಅವಘಡ ಸಂಭವಿಸಿದ್ದು, ಸ್ಫೋಟದ ರಭಸಕ್ಕೆ ಇಬ್ಬರು ಕಾರ್ಮಿಕರ ಕಣ್ಣು, ಕಿವಿ, ಬಾಯಿ, ಮೂಗು ಸೇರಿ ಹಲವೆಡೆ ಸುಟ್ಟ ಗಾಯಗಳಾಗಿವೆ. ಇದೀಗ ಗಾಯಾಳು ಕೂಲಿ ಕಾರ್ಮಿಕ ಕುಟುಂಬದವರು ಖಾಸಗಿ ಆಸ್ಪತ್ರೆ ಬಳಿ ಆಸ್ಪತ್ರೆ ಬಿಲ್ ಪಾವತಿಸಲು ಪರದಾಡುತ್ತಿದ್ದು, ದಿಕ್ಕುಕಾಣದೆ ಕಂಗಲಾಗಿ ಕಣ್ಣೀರಿಡುತ್ತಿದ್ದಾರೆ.

ಘಟನೆ ಸಂಬಂಧ ವೈಟ್ ಫೀಲ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕುಶಾಲ್ ಅರ್ಥ ಮೂವರ್ಸ್​​​​​ನ ಮಂಜುನಾಥ್ ರೆಡ್ಡಿ, ಕುಶಾಲ್ ರೆಡ್ಡಿ, ಪ್ರಭು, ಲೋಕೇಶ್, ವಿಕ್ರಮ್ ಮರ್ಲ, ಅಶೋಕ್ ಶೆಟ್ಟಿ, ಸಾಕೇತ್ ವಿರುದ್ಧ ದೂರು ದಾಖಲಾಗಿದೆ. ಗಾಯಾಳು ಶ್ರೀನಿವಾಸ್ ಪತ್ನಿ ಕಲ್ಯಾಣಿ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಲಾಗಿದೆ. ಸದ್ಯ 8 ಕ್ಕೂ ಹೆಚ್ಚು ಆರೋಪಿಗಳ ವಿರುದ್ಧ ಕೇಸ್ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net