ಎ.ಆರ್. ರೆಹಮಾನ್ ಮನೆಯಲ್ಲಿ ಮಗಳ ಮದುವೆ ಸಂಭ್ರಮ: ಖತೀಜಾರ ಕೈಹಿಡಿಯಲಿದ್ದಾರೆ ಉದ್ಯಮಿ ರಿಯಾಸ್ದೀನ್ ಶೇಕ್​

New Project (13)
Published on

ಮುಂಬೈ: ಸ್ವರ ಮಾಂತ್ರಿಕ, ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟುತ್ತಿದೆ. ಹಿರಿಯ ಪುತ್ರಿ ಖತೀಜಾ ರೆಹಮಾನ್​ ಅವರ ಮದುವೆ ನಿಶ್ಚಿತಾರ್ಥ ಉದ್ಯಮಿ ರಿಯಾಸ್ದೀನ್ ಶೇಕ್ ಮೊಹಮದ್ ಜತೆ ಇತ್ತೀಚಿಗೆ ನೆರವೇರಿದ್ದು, ಶೀಘ್ರದಲ್ಲೇ ಸಪ್ತಪದಿ ತುಳಿಯಲಿದ್ದಾರೆ.

ಈ ಬಗ್ಗೆ ಖತೀಜಾ ರೆಹಮಾನ್ ಅವರೇ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 'ದೇವರ ಆಶೀರ್ವಾದದಿಂದ ರಿಯಾಸ್ದೀನ್​ ಶೇಖ್​ ಮೊಹಮದ್​ ಜತೆ ನನ್ನ ನಿಶ್ಚಿತಾರ್ಥ ನೆರವೇರಿತು. ಈ ವಿಷಯ ತಿಳಿಸಲು ಖುಷಿ ಆಗುತ್ತಿದೆ. ರಿಯಾಸ್ದೀನ್​ ಉದ್ಯಮಿ ಹಾಗೂ ಆಡಿಯೋ ಇಂಜಿನಿಯರ್​. ನನ್ನ ಹುಟ್ಟುಹಬ್ಬದ ದಿನವೇ (ಡಿ.29) ನಮ್ಮಿಬ್ಬರ ಮದುವೆ ನಿಶ್ಚಿತಾರ್ಥ ಆಪ್ತರು ಮತ್ತು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ನಡೆಯಿತು' ಎಂದು ಬರೆದುಕೊಂಡಿರುವ ಖತೀಜಾ, ಎಂಗೇಜ್‍ಮೆಂಟ್​ ಉಡುಗೆಯ ಧಿರಿಸಿನಲ್ಲಿ ತೆಗೆಸಿಕೊಂಡಿದ್ದ ತನ್ನ ಫೋಟೋ ಜತೆಗೆ ರಿಯಾಸ್ದೀನ್​ ಅವರ ಫೋಟೋವನ್ನು ಅಪ್​ಲೋಡ್​ ಮಾಡಿಕೊಂಡಿದ್ದಾರೆ.

ರೆಹಮಾನ್​ ಅವರಿಗೆ ಮೂವರು ಮಕ್ಕಳು. ಅವರಲ್ಲಿ ಖತೀಜಾ ಹಿರಿಯ ಮಗಳು. ಅಪ್ಪನಂತೆ ಸಂಗೀತದತ್ತ ಆಸಕ್ತಿ ಹೊಂದಿರುವ ಖತೀಜಾ ಕೂಡ ಸಂಗೀತಗಾರ್ತಿ. ಖತೀಜಾಗೆ ಮದುವೆ ಫಿಕ್ಸ್​ ಆಗಿರುವ ಸುದ್ದಿ ತಿಳಿದ ಅಭಿಮಾನಿಗಳು, ನೆಟ್ಟಿಗರು, ಸಿನಿ ರಂಗದವರು, ಗಣ್ಯರು ಶುಭಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net