ಬೊಜ್ಜು ಕರಗಿಸಲು ಭಾರತ್​ ಜೋಡೋ ಯಾತ್ರೆ ಮಾಡ್ತಿದ್ದಾರೆ: ರೇಣುಕಾಚಾರ್ಯ

renukacharya
Published on

ಬೆಂಗಳೂರು: ಬೊಜ್ಜು-ಕೊಬ್ಬು ಕರಗಿಸುವ ಸಲುವಾಗಿ ಕಾಂಗ್ರೆಸ್​ನವರು ಭಾರತ್​ ಜೋಡೋ ಯಾತ್ರೆ ಮಾಡ್ತಿದ್ದಾರೆ ಎಂದು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಲೇವಡಿ ಮಾಡಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ರೇಣುಕಾಚಾರ್ಯ, ಇದು ಜೋಡೋ ಅಲ್ಲ, ತೋಡೋ. ಬಂದ್ಯಾ ಪುಟ್ಟ ಹೋದ್ಯಾ ಪುಟ್ಟ ಅಷ್ಟೆ. ಸಿದ್ದರಾಮಯ್ಯ ಅವರೇ 2023ರ ಚುನಾವಣೆ ಬರುತ್ತೆ ಕಾದು ನೋಡಿ. ಸ್ಟ್ರಾಂಗ್ ನಿವ್ಯಾರೂ ಸ್ಟ್ರಾಂಗ್​ ಅಲ್ಲ, ರಾಜ್ಯದ ಪ್ರಜ್ಞಾವಂತ ಮತದಾರ ಸ್ಟ್ರಾಂಗ್​. 2023ರಲ್ಲಿ ಜನರೇ ನಿಮ್ಮನ್ನು ಮನೆಗೆ ಕಳಿಸ್ತಾರೆ ಎಂದು ವಾಗ್ದಾಳಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net