

ಬೆಂಗಳೂರು: ಮಂಡ್ಯ ಮೂಲದ ಯುವಕನೊಬ್ಬನನ್ನು ಬಲವಂತವಾಗಿ ಮತಾಂತರ ಮಾಡಿದ ಪ್ರಕರಣದ ಪ್ರಮುಖ ಆರೋಪಿ, ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಅನ್ಸರ್ ಪಾಷಾ ಎಂಬುವರನ್ನು ತಮಿಳುನಾಡಿನಲ್ಲಿ ಬಂಧಿಸಲಾಗಿದೆ.
ಇತ್ತೀಚಿಗೆ ಮಂಡ್ಯ ಮೂಲದ ಯುವಕನೊಬ್ಬ ಮತಾಂತರ ಕೂಪಕ್ಕೆ ಸಿಲುಕಿ ಅನುಭವಿಸಿದ್ದ ನೋವನ್ನು ವಿಡಿಯೋ ಮೂಲಕ ಎಳೆಎಳೆಯಾಗಿ ಬಿಚ್ಚಿಟ್ಟಿದ್ದ. ಈ ವಿಡಿಯೋ ವೈರಲ್ ಆಗಿತ್ತು. ಈ ಪ್ರಕರಣ ಸಂಬಂಧ ನಿನ್ನೆ(ಬುಧವಾರ)ನಯಾಜ್ ಪಾಷ ಸೇರಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇಂದು(ಗುರುವಾರ) ಮುಂಜಾನೆ ಅನ್ಸರ್ ಪಾಷನನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಕೇಸ್ನಲ್ಲಿ ಇದುವರೆಗೂ ಐವರು ಆರೋಪಿಗಳನ್ನು ಬಂಧಿಸಲಾಗಿದೆ.