ಆತ್ಮಹತ್ಯೆಗೆ ಯತ್ನಿಸಿದ ಅಪ್ರಾಪ್ತ ವಿವಾಹಿತೆ

suicide hang
Published on

ಕೊಳ್ಳೇಗಾಲ : ತಾಲೂಕಿನ ಇಕ್ಕಡಹಳ್ಳಿ ಗ್ರಾಮದಲ್ಲಿ ಮಾವ ಮತ್ತು ನಾದಿನಿ ಕಿರುಕುಳಕ್ಕೆ ಬೇಸತ್ತು ಅಪ್ರಾಪ್ತ ಗೃಹಿಣಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಗ್ರಾಮದ ಮಹೇಶ್ ಅವರ ಪತ್ನಿ 17 ವರ್ಷದ ಅಪ್ರಾಪ್ತೆ ಆತ್ಮಹತ್ಯೆಗೆ ಯತ್ನಿಸಿದಾಕೆ. ಅಪ್ರಾಪ್ತೆ ಹಾಗೂ ಪತಿ ಮಹೇಶ್ 5 ತಿಂಗಳ ಹಿಂದೆ ಪರಿಚಯವಾಗಿ ಇಬ್ಬರಿಗೂ ಪ್ರೇಮಾಂಕರವಾಗಿತ್ತು. ನಂತರ ಪಟ್ಟಣದ ಮರಡಿ ಗುಡ್ಡದ ಶ್ರೀ ಮಹದೇಶ್ವರ ದೇವಸ್ಥಾನದಲ್ಲಿ ವಿವಾಹ ನಡೆದಿತ್ತು. ಪತಿ ಮಹೇಶ್ ತಂದೆ ಕೆಂಪರಾಜು ಈತನ ಮಗಳು ಚೈತ್ರಾ ಬಾಲಕಿಗೆ ಪ್ರತಿದಿನ ಬೈದು ಕಿರುಕುಳ ನೀಡುತ್ತಿದ್ದರು. ಇದನ್ನು ಸಹಿಸಲಾಗದೆ ಮಾ.17 ರಂದು ರಾತ್ರಿ ಮನೆಯಲ್ಲಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ನಂತರ ಅಕ್ಕಪಕ್ಕದವರು ಈಕೆಯನ್ನು ನಗರದ ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಮಹೇಶ್ ತಂದೆ ಕೆಂಪರಾಜು, ತಂಗಿ ಚೈತ್ರಾ ವಿರುದ್ಧ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net