ತಕ್ಷಣ ಡಾನ್ಸ್​ ಕ್ಲಾಸ್​ಗೆ ಬಾ, ನನ್ನನ್ನು ಪ್ರೀತಿಸು, ಇಲ್ಲಾಂದ್ರೆ ಸಾಯಿಸುವೆ... ಅಪ್ರಾಪ್ತೆಗೆ ಅನ್ಯಕೋಮಿನ ಯುವಕನಿಂದ ಬೆದರಿಕೆ

rape sex
Published on

ಶನಿವಾರಸಂತೆ: "ನೀನು ನನ್ನನ್ನು ಪ್ರೀತಿಸಬೇಕು, ಇಲ್ಲದಿದ್ದರೆ ಕೊಲೆ ಮಾಡುತ್ತೇನೆ'' ಎಂದು ಹಿಂದೂ ಧರ್ಮದ ಅಪ್ರಾಪ್ತೆಗೆ ಬೆದರಿಕೆ ಹಾಕಿದ್ದ ಅನ್ಯ ಕೋಮಿನ ಯುವಕನನ್ನು ಶುಕ್ರವಾರ ಶನಿವಾರಸಂತೆ ಪೊಲೀಸರು ಬಂಧಿಸಿದ್ದಾರೆ.

ಸಲ್ಮಾನ್​ ಎಂಬಾತ ಬಂಧಿತ ಆರೋಪಿ. ಈತ ಶನಿವಾರಸಂತೆಯಲ್ಲಿ ಡಾನ್ಸ್​ ತರಗತಿ ನಡೆಸುತ್ತಿದ್ದು, ಎರಡು ವರ್ಷಗಳ ಹಿಂದೆ ಬಾಲಕಿ ಡಾನ್ಸ್​ ತರಗತಿಗೆ ಹೋಗುತ್ತಿದ್ದಳು. ನಂತರ ತರಗತಿಗೆ ಹೋಗುವುದನ್ನು ನಿಲ್ಲಿಸಿದ್ದಳು. ಈ ನಡುವೆ, ಅಪ್ರಾಪ್ತ ಹುಡುಗಿಗೆ ಕರೆ ಮಾಡಿದ ಸಲ್ಮಾನ್​, "ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ, ತಕ್ಷಣ ಡಾನ್ಸ್​ ತರಗತಿಗೆ ಬಾ'' ಎಂದು ಒತ್ತಾಯಪೂರ್ವಕವಾಗಿ ಕರೆಸಿಕೊಂಡಿದ್ದಾನೆ. ನಂತರ, "ನೀನು ನನ್ನನ್ನು ಪ್ರೀತಿಸಬೇಕು. ಇಲ್ಲದಿದ್ದರೆ ಕೊಲೆ ಮಾಡುತ್ತೇನೆ'' ಎಂದು ಬೆದರಿಕೆ ಹಾಕಿದ್ದಾನೆ. ಇದನ್ನು ತಿಳಿದ ಹಿಂದುಪರ ಸಂಘಟನೆ ಕಾರ್ಯಕರ್ತರು ಡಾನ್ಸ್​ ತರಗತಿಗೆ ತೆರಳಿ ಅಲ್ಲೇ ಇದ್ದ ಯುವಕ ಮತ್ತು ಅಪ್ರಾಪ್ತೆಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಡಾನ್ಸ್​ ಕಲಿಸುವುದಾಗಿ ಸಲ್ಮಾನ್​ ತಮ್ಮ ಪುತ್ರಿಯನ್ನು ತರಗತಿಗೆ ಕರೆಸಿಕೊಂಡು ಲೈಂಗಿಕ ಕಿರುಕುಳ ನೀಡಿದ್ದಲ್ಲದೆ, ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಬಾಲಕಿಯ ಪಾಲಕರು ದೂರು ನೀಡಿದ್ದಾರೆ. ಈ ಸಂಬಂಧ ಶನಿವಾರಸಂತೆ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net