ಏನಿಲ್ಲ, ನಮ್ ನಡುವೆ ಅಂತಹದ್ದೇನಿಲ್ಲ...

r-ashok
Published on

ಬೆಂಗಳೂರು: ಮುಖ್ಯಮಂತ್ರಿ, ಸಚಿವ ಸಂಪುಟದ ಸಹೋದ್ಯೋಗಿಗಳ ಮಧ್ಯೆ ಏನಿಲ್ಲ, ಅಂತಹದ್ದೇನಿಲ್ಲ. ಎಲ್ಲರೂ ಒಟ್ಟಾಗಿದ್ದೇವೆ, ತಂಡವು ಒಟ್ಟಾಗಿ ಸ್ಫೂರ್ತಿಯಿಂದ ಕೆಲಸ ಮಾಡುತ್ತಿದೆ ಎಂದು ಆರ್.ಅಶೋಕ್ ವಿಶ್ಲೇಷಿಸಿದರು.

ಸಂಸದ ತೇಜಸ್ವಿ ಸೂರ್ಯ ಅವರ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ವೇಳೆ ‌ಸಿಎಂ ಬಿಎಸ್​ವೈ ಒಂದು ಕಡೆ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಇನ್ನೊಂದು ಕಡೆ, ಉಳಿದ ಸಚಿವರು ಮತ್ತೊಂದೆಡೆ ಎಂಬ ಪ್ರತಿಪಕ್ಷಗಳ ಟೀಕೆಗೆ ಅಶೋಕ್​ ಪ್ರತಿಕ್ರಿಯಿಸಿದರು. ಇದನ್ನೂ ಓದಿರಿ ಹೈಕೋರ್ಟ್​ ಸೂಚನೆ ಬೆನ್ನಲ್ಲೇ ಕೆಲಸಕ್ಕೆ ಬಂದ ಸಾರಿಗೆ ನೌಕರರು

ಸಿಎಂ ಬಿಎಸ್​ವೈ ಜತೆಗೆ ಇಡೀ ಮಂತ್ರಿ ಮಂಡಲ ಸಮನ್ವಯದಿಂದ ಕೆಲಸ ಮಾಡುತ್ತಿದೆ. ಕರೊನಾ ಮಟ್ಟ ಹಾಕುವುದು ನಮ್ಮ ಮುಂದಿರುವ ಗುರಿ. ಸಂಕಷ್ಟ ಸಮಯವನ್ನು ಸವಾಲಾಗಿ ಸ್ವೀಕರಿಸಿ ಸಂಬಂಧಿಸಿದ ಸಚಿವರೆಲ್ಲರೂ ಹಗಲು-ರಾತ್ರಿ ಶ್ರಮಿಸುತ್ತಿದ್ದೇವೆ ಎಂದು ಅಶೋಕ್​ ಹೇಳಿದರು.

ಪ್ರತಿಪಕ್ಷಗಳ ವ್ಯಂಗ್ಯ, ವಾಗ್ದಾಳಿ, ಟೀಕೆಗಳಿಂದ ಹಿಂಜರಿಯುವುದಿಲ್ಲ. ಜವಾಬ್ದಾರಿಯನ್ನು ಒಮ್ಮತದಿಂದ ನಿರ್ವಹಿಸಿ ಜನರ ಜೀವ, ಆರೋಗ್ಯ, ಜೀವನ ರಕ್ಷಣೆಗೆ ಪಣತೊಟ್ಟು ದುಡಿಯುತ್ತಿದ್ದೇವೆ ಎಂದು ಆರ್.ಅಶೋಕ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net