ರಾಜಸ್ಥಾನದಲ್ಲಿ ಯುದ್ಧ ವಿಮಾನ ಪತನ: ಇಬ್ಬರು ಪೈಲಟ್​ಗಳು ದುರ್ಮರಣ

MiG-21 fighter aircraft of the Indian Air Force crashed near Barmer district
Published on

ರಾಜಸ್ಥಾನ: ಭಾರತೀಯ ವಾಯುಪಡೆಗೆ ಸೇರಿದ ಯುದ್ಧ ವಿಮಾನವೊಂದು ರಾಜಸ್ಥಾನದ ಬಾರ್ಮರ್​ ಜಿಲ್ಲೆಯಲ್ಲಿ ಪತನಗೊಂಡಿದ್ದು, ಇಬ್ಬರು ಪೈಲಟ್​ಗಳು ದುರಂತ ಅಂತ್ಯಕಂಡಿದ್ದಾರೆ.

'ಮಿಗ್ ​​-21' ಹೆಸರಿನ ಯುದ್ಧ ವಿಮಾನ ರಾಜಸ್ಥಾನದಲ್ಲಿ ಗುರುವಾರ ರಾತ್ರಿ ಪತನಗೊಂಡಿದ್ದು, ಕ್ಷಣಾರ್ಧದಲ್ಲೇ ಬೆಂಕಿ ಹೊತ್ತಿಕೊಂಡಿದೆ. ವಿಮಾನದ ಅವಶೇಷಗಳು ಒಂದು ಕಿಲೋ ಮೀಟರ್ ದೂರದವರೆಗೂ ಹರಡಿವೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಮತ್ತು ವಾಯುಪಡೆ ಅಧಿಕಾರಿಗಳು ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯ ಮುಂದುವರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net