ಪಾದಯಾತ್ರೆ ನಡೆಸದಂತೆ ರಾತ್ರೋರಾತ್ರಿ ನೋಟಿಸ್ ಜಾರಿ: ಇದೆಲ್ಲವೂ ಡಿಕೆಶಿಗೆ ಕರೊನಾ ಹಬ್ಬಿಸೋ ಯತ್ನ ಎಂದ ಸುರೇಶ್​

DK Suresh
Published on

ರಾಮನಗರ: ಮೇಕೆದಾಟು ಪಾದಯಾತ್ರೆ ನಡೆದಂತೆ ಕನಕಪುರದ ಡಿ.ಕೆ.ಶಿವಕುಮಾರ್ ಅವರ ಮನೆಗೆ ರಾತ್ರೋರಾತ್ರಿ ನೋಟಿಸ್ ಜಾರಿ ಮಾಡಲಾಗಿದೆ.ಎಸ್ಪಿ, ಎಸಿ, ತಹಸೀಲ್ದಾರ್ ಅವರು

ತಡರಾತ್ರಿ ನೋಟಿಸ್ ನೀಡಿದ್ದಾರೆ. ಆದರೆ, ಡಿಕೆಶಿ ನೋಟಿಸ್ ಪಡೆದುಕೊಂಡಿಲ್ಲ. ಹೀಗಾಗಿ ಅವರ ಮನೆ ಬಾಗಿಲಿಗೆ ಪೊಲೀಸರು ನೋಟಿಸ್ ಅಂಟಿಸಿದ್ದಾರೆ.

ಈ ನೋಟಿಸ್ ಬಗ್ಗೆ ಮಾತನಾಡಿದ ಡಿ.ಕೆ.ಸುರೇಶ್, ಪಾದಯಾತ್ರೆಗೆ ಸಮಸ್ಯೆ ಇಲ್ಲ. ಕೋವಿಡ್ ಸೋಂಕಿತ ಜಿಲ್ಲಾಧಿಕಾರಿ ಅವರಿಂದ ನೋಟಿಸ್​ ಕೊಟ್ಟಿದ್ದಾರೆ. ಈ ಮೂಲಕ ಡಿಕೆಶಿ ಅವರಿಗೆ ಕೊವೀಡ್ ಸೋಂಕು ಹರಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈಗಾಗಲೇ ಬೇರೆ ಜಿಲ್ಲೆಗಳಿಂದ ಬರುವ ವಾಹನಗಳನ್ನು ತಡೆಯುತ್ತಿದ್ದಾರೆ. ಮುಖ್ಯಮಂತ್ರಿಗೆ ಕೋವಿಡ್ ಬಂದಿದೆ. ಅದನ್ನು ಕಾಂಗ್ರೆಸ್​ನವರರು ಅಂಟಿಸಿದ್ರಾ? ನಮಗೂ ಬದ್ದತೆ ಇದೆ, ಮುನ್ನೆಚ್ಚರಿಕೆವಹಿಸಿ ಪಾದಯಾತ್ರೆ ಮಾಡುತ್ತೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net