More

    4ನೇ ದಿನದ ಪಾದಯಾತ್ರೆ: ಕಾಂಗ್ರೆಸ್​ನ 30 ನಾಯಕರ ವಿರುದ್ಧ ಎಫ್​ಐಆರ್

    ರಾಮನಗರ: ಮೇಕೆದಾಟು ಪಾದಯಾತ್ರೆಯ ನಾಲ್ಕನೇ ದಿನವಾದ ಬುಧವಾರ ಪಾದಯಾತ್ರೆಯ ನೇತೃತ್ವ ವಹಿಸಿದ್ದ ಕಾಂಗ್ರೆಸ್​ನ 30 ನಾಯಕರ ವಿರುದ್ಧ ರಾಮನಗರ ಗ್ರಾಮೀಣ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

    ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಡಿ.ಕೆ.‌ ಸುರೇಶ್, ಟಿ.ಬಿ.‌ಜಯಚಂದ್ರ, ಕೃಷ್ಣ ಭೈರೇಗೌಡ, ಎಚ್. ಆಂಜನೇಯ, ಅಭಯ್ ಚಂದ್ರ, ಪ್ರಿಯಾಂಕ್ ಖರ್ಗೆ, ಸಲೀಂ ಅಹಮ್ಮದ್, ಧ್ರುವನಾರಾಯಣ, ಶರಣಪ್ರಕಾಶ ಪಾಟೀಲ, ಕಿಮ್ಮನೆ ರತ್ನಾಕರ, ಪರಮೇಶ್ವರ ನಾಯ್ಕ, ಕೆ.ವೈ. ನಂಜೇಗೌಡ, ಅಂಜಲಿ ನಿಂಬಾಳ್ಕರ್, ಎಸ್. ರವಿ, ಕೆ.ರಾಜು, ಬಿ.ಆರ್. ಯಾವಗಲ್, ಐವಾನ್ ಡಿಸೋಜಾ, ಕುಸುಮಾ, ಮೊಹಮ್ಮದ್ ನಲಪಾಡ್, ಇಕ್ಬಾಲ್ ಹುಸೇನ್, ಕೆ.ಸಿ. ವೀರೇಗೌಡ, ರಾಮನಗರ ನಗರಸಭೆ ಅಧ್ಯಕ್ಷೆ‌ ಪಾರ್ವತಮ್ಮ ಮತ್ತಿತರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಮೊದಲ ದಿನದ ಪಾದಯಾತ್ರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಸೇರಿ 31 ಮಂದಿ ವಿರುದ್ಧ ಕೋವಿಡ್​ ನಿಯಮ ಉಲ್ಲಂಘನೆ ಪ್ರಕರಣ ಸಾತನೂರು ಪೊಲೀಸ್​ ಠಾಣೆಯಲ್ಲಿ ದಾಖಲಾಗಿತ್ತು. ಇದರ ಮುಂದುವರಿದ ಭಾಗವಾಗಿ ಡಿ.ಕೆ. ಶಿವಕುಮಾರ್​, ಸಂಸದ ಸುರೇಶ್​ ಸೇರಿ ಒಟ್ಟು 41 ಮಂದಿ ವಿರುದ್ಧ ಎರಡನೇ ಕೇಸ್​ ದಾಖಲಾಗಿತ್ತು. ಈ ಪೈಕಿ ಕೃಷ್ಣಭೈರೇಗೌಡ, ಎಚ್​. ಆಂಜನೇಯ, ಮಧು ಬಂಗಾರಪ್ಪ ಸೇರಿ 28 ಹೊಸಬರ ಹೆಸರು 2ನೇ ಎಫ್​ಐಆರ್​ನಲ್ಲಿ ಇದೆ. ಇದೀಗ ಕರೊನಾ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ಕನಕಪುರ ಟೌನ್​ ಪೊಲೀಸ್​ ಠಾಣೆಯಲ್ಲಿ ಡಿಕೆಶಿ ಸೇರಿದಂತೆ 64 ಜನರ ವಿರುದ್ಧ 3ನೇ ಎಫ್​ಐಆರ್​ ದಾಖಲಾಗಿದೆ.

    ಮೇಕೆದಾಟು ಪಾದಯಾತ್ರೆ: ಬೆಂಗ್ಳೂರು-ಮೈಸೂರು ಹೆದ್ದಾರೀಲಿ ಸಂಚರಿಸುವ ವಾಹನಗಳಿಗೆ ಬದಲಿ ಮಾರ್ಗ ಪ್ರಕಟ

    ಮೇಕೆದಾಟು ಪಾದಯಾತ್ರೆ ತಡೆಗೆ ಪಿಐಎಲ್​: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್​ ಹಿಗ್ಗಾಮುಗ್ಗಾ ತರಾಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts