ರಾಮನಗರಲ್ಲಿ ಪೊಲೀಸ್​ ಬಂದೋಬಸ್ತ್: ಪಾದಯಾತ್ರೆ ಮುಂದುವರಿಸಲು ಕಾಂಗ್ರೆಸ್​ ಸಜ್ಜು

mekedatu padayatre
Published on

ರಾಮನಗರ: ಮೇಕೆದಾಟು ಪಾದಯಾತ್ರೆ ತಡೆಯದೆ ಇರುವಷ್ಟು ಅಸಮಮರ್ಥವೇ ಎಂದು ನಿನ್ನೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್​ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಪಾದಯಾತ್ರೆಯ ಭವಿಷ್ಯ ಏನಾಗುತ್ತೆ ಎಂಬ ಕುತೂಹಲ ರಾಜ್ಯದ ಜನರಲ್ಲಿದೆ. ಸದ್ಯದ ಮಾಹಿತಿ ಪ್ರಕಾರ ಪಾದಯಾತ್ರೆ ತಡೆಯುವಂತೆ ಇಲ್ಲವೇ ಕಾರ್ಯಕರ್ತರನ್ನು ಬಂಧಿಸುವಂತೆ ಸರ್ಕಾರದಿಂದ ಸದ್ಯದವರೆಗೆ ಯಾವುದೇ ಆದೇಶ ಬಂದಿಲ್ಲ. 5ನೇ ದಿನದ ಪಾದಯಾತ್ರೆಗೆ ಕೈ ಮುಖಂಡರು ಸಿದ್ಧತೆ ನಡೆಸಿದ್ದಾರೆ.

ಮೇಕೆದಾಟು ಪಾದಯಾತ್ರೆ ಹಿನ್ನೆಲೆಯಲ್ಲಿ ರಾಮನಗರ ನಗರದಾದ್ಯಂತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ತುಮಕೂರು, ಮಂಡ್ಯ, ಚಾಮರಾಜನಗರ ಭಾಗದಿಂದಲೂ ಪೊಲೀಸರನ್ನು ಕರೆಸಿಕೊಳ್ಳಲಾಗಿದೆ.

ಪಾದಯಾತ್ರೆ ತಡೆಯುವಂತೆ ಇಲ್ಲವೇ ಕಾರ್ಯಕರ್ತರನ್ನು ಬಂಧಿಸುವಂತೆ ಸರ್ಕಾರದಿಂದ ಸದ್ಯದವರೆಗೆ ಯಾವುದೇ ಆದೇಶ ಬಂದಿಲ್ಲ. ಕೇವಲ ಸಂಚಾರ ಮಾರ್ಗಗಳನ್ನು ಬದಲಿಸಿದ್ದೇವೆ. ಪಾದಯಾತ್ರೆಗೆಂದು‌ ಹೊರ ಜಿಲ್ಲೆಯಿಂದ ಬರುವವರಿಗೆ ರಾಮನಗರಕ್ಕೆ ಪ್ರವೇಶ ನೀಡುವುದಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇಂದಿನ ಪಾದಯಾತ್ರೆ ರಾಮನಗರದಿಂದ ಬಿಡದಿವರೆಗೆ ನಡೆಯಲಿದೆ. ಇಲ್ಲಿನ ಶಾನ್ ಚಿತ್ರಮಂದಿರದ ಆವರಣದಲ್ಲಿ 3 ಸಾವಿರ ಮಂದಿಗೆ ಉಪಾಹಾರದ ವ್ಯವಸ್ಥೆ‌ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net