ಬುಡಕಟ್ಟು ಜನರ ಸಮಸ್ಯೆ ಚರ್ಚೆಗೆ ಸಚಿವರ ಸಭೆ

Vidhanasoudha
Published on

ಬುಡಕಟ್ಟು ಜನರ ಸಮಸ್ಯೆ ಚರ್ಚೆಗೆ ಸಚಿವರ ಸಭೆ

ಬೆಂಗಳೂರು: ಅಳವಿನಂಚಿನಲ್ಲಿರುವ ಆದಿವಾಸಿ ಬುಡಕಟ್ಟು ಜನರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನ.26ರಂದು ಸಂಬಂಧಪಟ್ಟ ಸಚಿವರ ಸಭೆ ಕರೆದಿದ್ದಾರೆ.

ಬುಡಕಟ್ಟು ಹಾಡಿಗಳಿಗೆ ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ಸೌಲಭ್ಯ, ಹಾಡಿಗಳಿಗೆ ಸಂಪರ್ಕ ರಸ್ತೆ, ಸಮುದಾಯದ ಹಕ್ಕಿನಡಿ ಕಿರು ಅರಣ್ಯ ಉತ್ಪನ್ನಗಳ ಸಂಗ್ರಹಣೆ, ಹಾಡಿಗಳಲ್ಲಿ ಮನೆಗಳ ನಿರ್ಮಾಣ, ಹಕ್ಕುಪತ್ರ ವಿತರಣೆ, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಪೌಷ್ಠಿಕ ಆಹಾರ ಲಭ್ಯತೆ ಕುರಿತು ಸಭೆಯಲ್ಲಿ ಚರ್ಚೆ ನಡೆಯುವುದು.

ಇಂಧನ, ಕಂದಾಯ, ಗ್ರಾಮೀಣಾಭಿವೃದ್ಧಿ, ಅರಣ್ಯ ಸಚಿವರು ಸಭೆಯಲ್ಲಿ ಹಾಜರಿರುವಂತೆ ಸೂಚನೆ ಕಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net