ಕನ್ನಡದ ಹಿರಿಯ ನಟ ಕೃಷ್ಣೇಗೌಡ ವಿಧಿವಶ, ತಿಂಗಳ ಹಿಂದೆಯೇ ಕರೊನಾಗೆ ಮಗ ಬಲಿಯಾದರೂ ತಂದೆಗೆ ತಿಳಿಯಲೇ ಇಲ್ಲ

bm krishnegowda
Published on

ಬೆಂಗಳೂರು: ಸ್ಯಾಂಡಲ್​ವುಡ್​ನ ಹಿರಿಯ ನಟ ಬಿ.ಎಂ.ಕೃಷ್ಣೇಗೌಡ ಅವರು ವಿಧಿವಶರಾಗಿದ್ದಾರೆ. ಮೃತರಿಗೆ 80 ವರ್ಷ ವಯಸ್ಸಾಗಿತ್ತು. ರಂಗಭೂಮಿ, ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಪೋಷಕ ಪಾತ್ರದಲ್ಲಿ ನಟಿಸುತ್ತಿದ್ದರು.

ಕಳೆದ ಏಪ್ರಿಲ್​ 13ರಂದು ಕೃಷ್ಣೇಗೌಡರಿಗೆ ಕರೊನಾ ಸೋಂಕು ತಗುಲಿತ್ತು. ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಸ್​ ಆಗಿದ್ದರು. ಆದರೆ ಕೃಷ್ಣೇಗೌಡರ ಮಗ ಸತೀಶ್​ ಒಂದು ತಿಂಗಳ ಹಿಂದೆಯೇ ಕರೊನಾಗೆ ಬಲಿಯಾಗಿದ್ದರು. ಆ ವೇಳೆ ತಂದೆ ಆಸ್ಪತ್ರೆಯಲ್ಲಿದ್ದ ಕಾರಣ ಮಗನ ಸಾವಿನ ಬಗ್ಗೆ ತಿಳಿಸಿರಲಿಲ್ಲ. ಇತ್ತೀಚಿಗೆ ಕರೊನಾದಿಂದ ಗುಣಮುಖರಾಗಿ ಮನೆಗೆ ಬಂದರೂ ಮಗನ ಸಾವಿನ ಸುದ್ದಿ ತಿಳಿದಿರಲಿಲ್ಲ. ಆದರೆ, ಮೂರು ದಿನದ ಹಿಂದೆ ಶ್ವಾಸಕೋಸ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಮತ್ತೆ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಇಂದು(ಮಂಗಳವಾರ)ಬೆಳಗ್ಗೆ ಹೃದಯಾಘಾತದಿಂದ ಕೃಷ್ಣೇಗೌಡ ನಿಧರಾಗಿದ್ದಾರೆ.

'ಮುಖ್ಯಮಂತ್ರಿ' ನಾಟಕದಲ್ಲಿ ಪಕ್ಷದ ಅಧ್ಯಕ್ಷನ ಪಾತ್ರವನ್ನ ಕೃಷ್ಣೇಗೌಡ ನಿರ್ವಹಿಸಿದ್ದರು. ಇವರ ಪಾತ್ರ ಹೆಚ್ಚು ಪ್ರಸಿದ್ಧಿ ಪಡೆದಿತ್ತು. ವಿಷ್ಣುವರ್ಧನ್ ಮತ್ತು ಸಿತಾರ ಅಭಿನಯದ ‘ಹಾಲುಂಡ’ ತವರು ಚಿತ್ರದಲ್ಲಿ ‌ಕೃಷ್ಣೇಗೌಡರ ಪಾತ್ರ ಗಮನ ಸೆಳೆದಿತ್ತು. ಚಕ್ರವ್ಯೂಹ, ಸಂಸಾರ ನೌಕೆ, ಒಲವಿನ ಉಡುಗೊರೆ ಸೇರಿದಂತೆ 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net