ಫೇಸ್​ಬುಕ್​, ಟ್ವಿಟರ್​ನಿಂದ ಕ್ವಿಟ್ ಆಗ್ತಾರಾ ಪ್ರಧಾನಿ;ಯಾಕೆ ಈ ನಡೆ- ಜನರ ಪ್ರತಿಕ್ರಿಯೆ ಏನು!?

Narendra-Modi and social media 3 MAR 20
Published on

ನವದೆಹಲಿ: ಈ ಭಾನುವಾರ, ಫೇಸ್​ಬುಕ್​, ಟ್ವಿಟರ್, ಇನ್​ಸ್ಟಾಗ್ರಾಂ, ಯೂಟ್ಯೂಬ್​ ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲಿರುವ ನನ್ನ ಖಾತೆಗಳನ್ನು ಬಿಡೋದಾ ಅಂತ ಆಲೋಚನೆ ಮಾಡ್ತಿದ್ದೇನೆ. ಎಲ್ಲವನ್ನೂ ತಿಳಿಸುತ್ತಿರುತ್ತೇನೆ. - ಹೀಗೊಂದು ಸಂದೇಶವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ರಾತ್ರಿ ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಧಾನಿ ಮೋದಿಯವರಿಗೆ ಫೇಸ್​ಬುಕ್​ನಲ್ಲಿ 44 ದಶಲಕ್ಷ ಫಾಲೋವರ್ಸ್ ಇದ್ದು, ಟ್ವಿಟರ್​ನಲ್ಲಿ 53.3 ದಶಲಕ್ಷ ಫಾಲೋವರ್ಸ್ ಇದ್ದಾರೆ. ಅವರ ಈ ಟ್ವೀಟ್​ಗೆ ಒಂದು ಲಕ್ಷದಷ್ಟು ಜನ ಪ್ರತಿಕ್ರಿಯಿಸಿದ್ದು, 50 ಸಾವಿರದಷ್ಟು ಜನ ರೀಟ್ವೀಟ್ ಮಾಡಿದ್ದಾರೆ. 1.5 ಲಕ್ಷಕ್ಕೂ ಹೆಚ್ಚು ಜನ ಇಷ್ಟಪಟ್ಟಿದ್ದಾರೆ. ಕೆಲವರು ಪ್ರಧಾನಿಯವರ ಟ್ವೀಟನ್ನು ವಿಶ್ಲೇಷಿಸಿ ಕಾರಣ ಮತ್ತು ಪರಿಣಾಮವನ್ನೂ ಮುಂದಿಟ್ಟಿದ್ದಾರೆ.

ಈ ಟ್ವೀಟ್ ಸಂದೇಶಕ್ಕೆ ಭರಪೂರ ಪ್ರತಿಕ್ರಿಯೆ ಲಭ್ಯವಾಗಿದ್ದು, ಅವರ ಈ ನಿರ್ಧಾರ ಸಮಾಜದ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು ಎಂಬ ಚರ್ಚೆಯೂ ಆರಂಭವಾಗಿದೆ. ಟ್ವಿಟರ್, ಫೇಸ್​ಬುಕ್​ಗಳಿಂದ ಜನ ಸಾಮೂಹಿಕವಾಗಿ ನಿರ್ಗಮಿಸುವ ಸಾಧ್ಯತೆ ಇದೆಯೇ ಎಂಬ ವಿಚಾರ ಈಗ ಮುನ್ನೆಲೆಗೆ ಬಂದಿದೆ. ಪ್ರಧಾನಿಯವರ ಈ ಟ್ವೀಟ್​ಗೆ ಜನ ಚಿತ್ರವಿಚಿತ್ರವಾಗಿ ಪ್ರತಿಕ್ರಿಯೆ ನೀಡಲಾರಂಭಿಸಿದ್ದಾರೆ. ಕೆಲವು ಪೂರಕ ಪ್ರತಿಕ್ರಿಯೆ ನೀಡಿದರೆ, ಇನ್ನು ಕೆಲವರು ಸಾಧ್ಯವೇ ಇಲ್ಲ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net