ಶಿವಮೊಗ್ಗದ ಹರ್ಷನ ಕುಟುಂಬಕ್ಕೆ ಮಂತ್ರಾಲಯ ಮಠದಿಂದ ನೆರವು

1242831
Published on

ರಾಯಚೂರು: ಶಿವಮೊಗ್ಗದಲ್ಲಿ ಕೊಲೆಯಾದ ಭಜರಂಗದಳ ಕಾರ್ಯಕರ್ತ ಹರ್ಷನ ಕುಟುಂಬಕ್ಕೆ ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಸಾಂತ್ವನ ಹೇಳಿದ್ದು, ಮಠದಿಂದ 50 ಸಾವಿರ ರೂ. ಆರ್ಥಿಕ ನೆರವು ನೀಡುವುದಾಗಿ ತಿಳಿಸಿದ್ದಾರೆ.

ಹಿಂದು ಧರ್ಮಕ್ಕಾಗಿ ಪ್ರಾಣ ಅರ್ಪಿಸಿರುವ ಹರ್ಷನ ಕುಟುಂಬಕ್ಕೆ ವ್ಯಕ್ತಿಯ ಕೊರತೆ ನೀಗಿಸಲು ಸಾಧ್ಯವಿಲ್ಲ. ರಾಯರ ಪ್ರಸಾದ ರೂಪವಾಗಿ 50 ಸಾವಿರ ರೂ. ನೀಡುವ ಮೂಲಕ ಕುಟುಂಬಕ್ಕೆ ಆತ್ಮಸ್ಥೆರ್ಯ ನೀಡುವ ನಿಟ್ಟಿನಲ್ಲಿ ನೆರವು ನೀಡಲಾಗುತ್ತಿದೆ. ಹಣವನ್ನು ಶ್ರೀಮಠದಿಂದ ಕುಟುಂಬಕ್ಕೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ರಾಯರು ಹರ್ಷನ ಕುಟುಂಬಕ್ಕೆ ನೋವು ಮರೆವ ಶಕ್ತಿ ನೀಡಲಿ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net