ಮಂತ್ರಾಲಯದಲ್ಲಿ ರಾಯರ ಹುಂಡಿ ಹಣ ಎಣಿಕೆ: 1.98 ಕೋಟಿ ರೂಪಾಯಿ ಸಂಗ್ರಹ

mantralaya hundi
Published on

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಹುಂಡಿಯಲ್ಲಿ ಕಳೆದ 20 ದಿನದಲ್ಲಿ 1.98 ಕೋಟಿ ರೂಪಾಯಿ ಸಂಗ್ರಹವಾಗಿದೆ. ಒಟ್ಟು 129 ಗ್ರಾಂ ಬಂಗಾರ, 810 ಗ್ರಾಂ ಬೆಳ್ಳಿ ವಸ್ತುಗಳನ್ನು ಭಕ್ತರು ಕಾಣಿಕೆಯಾಗಿ ಸಲ್ಲಿಸಿದ್ದಾರೆ.

ಹುಂಡಿಗಳಿಗೆ ಸೆ.29 ರಿಂದ ಅ.18ರ ವರೆಗೆ ಸಲ್ಲಿಕೆಯಾದ ಕಾಣಿಕೆಯನ್ನು ಬುಧವಾರ ಎಣಿಕೆ ಮಾಡಲಾಯಿತು. ಸಂಗ್ರಹವಾದ ಹಣದಲ್ಲಿ 1.93 ಕೋಟಿ ರೂ. ನೋಟುಗಳು, 4.40 ಲಕ್ಷ ರೂ. ನಾಣ್ಯಗಳು ಇವೆ ಎಂದು ಶ್ರೀಮಠದ ವ್ಯವಸ್ಥಾಪಕ ಎಸ್​.ಕೆ.ಶ್ರೀನಿವಾಸರಾವ್​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net