ಕಾಡುಹಂದಿ ಬೇಟೆಗೆ ಇಟ್ಟಿದ್ದ ನಾಡಬಾಂಬ್ ಸ್ಫೋಟ; ವ್ಯಕ್ತಿಯ ಕೈ ಛಿದ್ರ...

ramngra
Published on

ರಾಮನಗರ:  ನಾಡಬಾಂಬ್ ಸಿಡಿದು ವ್ಯಕ್ತಿಯ ಕೈ ಛಿದ್ರವಾಗಿರುವ ಘಟನೆ ಕನಕಪುರ ತಾಲೂಕಿನ ನೇರಳಹಳ್ಳಿದೊಡ್ಡಿ ಗ್ರಾಮದಲ್ಲಿ ನಡೆದಿದೆ.

ನಾಡಬಾಂಬ್ ಸ್ಫೋಟದಿಂದ ನೌಷಾದ್ ಪಾಷಾ(29) ಎಂಬುವವರಿಗೆ ಗಂಭೀರ ಗಾಯವಾಗಿದ್ದು, ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ.

ಮಾಟಮಂತ್ರ ಮಾಡಿಸಿಟ್ಟ ತೆಂಗಿನಕಾಯಿ ಎಂದು ಪಾಷಾ ಅವರು ಪರಿಶೀಲಿಸುತ್ತಿದ್ದರು.  ರೈಸ್ ಮಿಲ್ ಹಿಂಭಾಗ ಬಿದ್ದಿದ್ದ ಚೆಂಡಿನ ರೀತಿಯ ವಸ್ತುವನ್ನು ನಾಡಬಾಂಬ್ ಎಂದು ತಿಳಿಯದೇ ಕೈಯಲ್ಲಿ ಹಿಡಿದಿದ್ದಾಗ ಅದು ಸ್ಫೋಟಗೊಂಡಿದೆ.  ಕಾಡುಹಂದಿ ಬೇಟೆಗೆ ಇಟ್ಟಿದ್ದ ನಾಡಬಾಂಬ್ ಸ್ಫೋಟವಾಗಿರುವ ಶಂಕೆ ವ್ಯಕ್ತವಾಗಿದೆ.

ಸ್ಫೋಟದ ತೀವ್ರತೆಗೆ ನೌಷದ್ ಪಾಷ ಕೈ ಛಿದ್ರಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನಾ ಸ್ಥಳಕ್ಕೆ ಕನಕಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅದೇ ಸ್ಥಳದಲ್ಲಿ ಮತ್ತೇರಡು ಬಾಂಬ್​ ಪತ್ತೆಯಾಗಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net