More

    100ಕ್ಕೂ ಹೆಚ್ಚು ವಿಶ್ವ ದಾಖಲೆಗಳನ್ನು ಸಾಧಿಸಿದ 14 ವರ್ಷದ ಬಾಲಕಿ

    ಚೆನ್ನೈ: ನಿರಂತರ ಅಭ್ಯಾಸದ ಮೂಲಕ 14 ವರ್ಷದ ಬಾಲಕಿ ಪ್ರಿಶಾ ವಿಶ್ವದಾದ್ಯಂತ ಯೋಗ ಸ್ಪರ್ಧೆಗಳಲ್ಲಿ 100ಕ್ಕೂ ಹೆಚ್ಚು ದಾಖಲೆಗಳನ್ನು ಮುರಿದು 200ಕ್ಕೂ ಹೆಚ್ಚು ಚಿನ್ನದ ಪದಕಗಳನ್ನು ಗೆದ್ದಿದ್ದಾಳೆ.

    ಕಾರ್ತಿಕೇಯ ಮತ್ತು ದೇವಿಪ್ರಿಯಾ ದಂಪತಿಯ ಪುತ್ರಿ ಪ್ರಿಶಾ (14). ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ವನ್ನಾರಪೇಟ್ ನಿವಾಸಿಯಾಗಿದ್ದಾಳೆ. ಪ್ರಿಶಾ ಅವರ ತಂದೆ ಉದ್ಯಮಿ ಮತ್ತು ತಾಯಿ ದೇವಿಪ್ರಿಯಾ ವಕೀಲರು. ಪ್ರಿಶಾ ಯೋಗಾಭ್ಯಾಸವನ್ನೂ ಮಾಡುತ್ತಿದ್ದಳು.

    ನೀರೊಳಗಿನ ಯೋಗ, ಸ್ವಿಮ್ಮಿಂಗ್, ಆಕ್ವಾ ಯೋಗ, ಕರ್ಸಿವ್ ರೈಟಿಂಗ್, ರೂಬಿಕ್ಸ್ ಕ್ಯೂಬ್ ಸಾಲ್ವಿಂಗ್ ಕೆಮಿಸ್ಟ್ರಿ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸೈಕಲ್ ಸವಾರಿ, ಸ್ಕೇಟಿಂಗ್, ಫಿಸಿಕ್ಸ್, ಗಣಿತ ಹೀಗೆ ಹಲವು ಕಲೆಗಳು ಎಲ್ಲರನ್ನೂ ಬೆರಗುಗೊಳಿಸುತ್ತಿವೆ. ತನ್ನ ಅಜ್ಜಿ ಮತ್ತು ತಾಯಿಯಿಂದ ಸ್ಫೂರ್ತಿ ಪಡೆದ ಪ್ರಿಶಾ ಎರಡು ವರ್ಷದಿಂದಲೂ ಯೋಗಾಭ್ಯಾಸ ಮಾಡುತ್ತಿದ್ದಾಳೆ. ವಜ್ರಾಸನ, ಹನುಮಾನ್ ಆಸನ, ಶುಕಾಸನ, ವಾಮದೇವ ಆಸನ ಇತ್ಯಾದಿಗಳನ್ನು ಸರಾಗವಾಗಿ ಮಾಡುತ್ತಾಳೆ. ಈಗಾಗಲೇ 100ಕ್ಕೂ ಹೆಚ್ಚು ವಿಶ್ವ ದಾಖಲೆಗಳನ್ನು ಹೊಂದಿದ್ದಾಳೆ.

    “ನೊಬೆಲ್ ವರ್ಲ್ಡ್ ರೆಕಾರ್ಡ್ಸ್”  ಅನೇಕ ಸಮೃದ್ಧ ವಿಶ್ವ ದಾಖಲೆ ಹೊಂದಿರುವವರು ಇದ್ದಾರೆ. ಆದರೆ 2023ರ ಸೆಪ್ಟೆಂಬರ್ 27ರಂದು ಭಾರತದ ತಮಿಳುನಾಡಿನ ತಿರುನೆಲ್ವೇಲಿಯಲ್ಲಿ 14 ವರ್ಷದ ಪ್ರಿಶಾ “ನೊಬೆಲ್ ವರ್ಲ್ಡ್ ರೆಕಾರ್ಡ್ಸ್”ನಲ್ಲಿ ತನ್ನ 100ನೇ ಅದ್ಭುತ ವಿಶ್ವ ದಾಖಲೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಪ್ರಶಸ್ತಿಯನ್ನು ಪಡೆದಿದ್ದಾರೆ.

    ಪ್ರಿಶಾ ಗಳಿಸಿದ ಪ್ರಶಸ್ತಿಗಳನ್ನು ಪ್ರದರ್ಶಿಸಲು ಪ್ರಿಶಾ ಪೋಷಕರು ತಮ್ಮ ಮನೆಯಲ್ಲಿ ವಿಶೇಷ ಕೊಠಡಿಯನ್ನು ಮೀಸಲಿಟ್ಟಿದ್ದಾರೆ. ಕೊಠಡಿಯನ್ನು ಪ್ರಿಶಾ ಅವರ ಟ್ರೋಫಿಗಳು, ಚಿನ್ನದ ಪದಕಗಳು ಮತ್ತು ಪ್ರಶಂಸಾ ಪತ್ರಗಳಿಂದ ಅಲಂಕರಿಸಲಾಗಿತ್ತು. ಚಿಕ್ಕ ವಯಸ್ಸಿನಲ್ಲೇ ಮೂರು ಡಾಕ್ಟರೇಟ್ ಪಡೆದು ಇತಿಹಾಸ ಸೃಷ್ಟಿಸಿದ್ದಾಳೆ. ಕಳೆದ ನಾಲ್ಕು ವರ್ಷಗಳಿಂದ ಹಲವು ಶಾಲಾ-ಕಾಲೇಜುಗಳಲ್ಲಿ ಉಚಿತವಾಗಿ ಯೋಗ ಕಲಿಸುತ್ತಿದ್ದಾರೆ. ಈ ಕುರಿತಾಗಿ ಒಂದು ಪುಸ್ತಕವನ್ನೂ ಬರೆದಿದ್ದಾಳೆ.  

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts