

ಸಾರ್ವಜನಿಕ ವಲಯದ ಉದ್ದಿಮೆಯಾಗಿರುವ ಕೋಲ್ ಇಂಡಿಯಾ ಲಿಮಿಟೆಡ್ನಲ್ಲಿ 2021ರ ಗೇಟ್ ಪರೀಕ್ಷೆ ಉತ್ತೀರ್ಣರಾದ ಅಭ್ಯರ್ಥಿಗಳಿಂದ ಮ್ಯಾನೇಜ್ವೆುಂಟ್ ಟ್ರೇನಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ಸಂಸ್ಥೆಯಲ್ಲಿ ಕನಿಷ್ಠ 60 ವಾರ ಕಾರ್ಯನಿರ್ವಹಿಸುವುದಾಗಿ 3ಲಕ್ಷ ರೂ.+ ಜಿಎಸ್ಟಿ ಮೊತ್ತ ಸೇರಿ ಸೇವಾಬಾಂಡ್ ನೀಡಬೇಕು.
ಮ್ಯಾನೇಜಿಂಗ್ ಟ್ರೇನಿ ವಿಭಾಗದಲ್ಲಿ ಮೈನಿಂಗ್- 253, ಎಲೆಕ್ಟ್ರಿಕಲ್- 117, ಮೆಕಾನಿಕಲ್- 134, ಸಿವಿಲ್- 57, ಇಂಡಸ್ಟ್ರಿಯಲ್ ಇಂಜಿನಿಯರಿಂಗ್- 15, ಜಿಯಾಲಜಿ ವಿಭಾಗದಲ್ಲಿ 12 ಸ್ಥಾನಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಮೈನಿಂಗ್, ಎಲೆಕ್ಟ್ರಿಕಲ್/ ಎಲೆಕ್ಟ್ರಿಕಲ್ ಆಂಡ್ ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಾನಿಕ್ಸ್ ಆಂಡ್ ಇಂಜಿನಿಯರಿಂಗ್, ಮೆಕಾನಿಕಲ್, ಸಿವಿಲ್, ಇಂಡಸ್ಟ್ರಿಯಲ್ ಇಂಜಿನಿಯರಿಂಗ್ನಲ್ಲಿ ಬಿಇ/ ಬಿ.ಟೆಕ್/ ಬಿಎಸ್ಸಿ ಪದವಿ, ಜಿಯಾಲಜಿಯಲ್ಲಿ ಎಂಎಸ್ಸಿ/ ಎಂ.ಟೆಕ್ ಪದವಿ ಪಡೆದಿದ್ದು, ಕನಿಷ್ಠ ಶೇ.60 (ಮೀಸಲಾತಿ ಕೋರುವ ಅಭ್ಯರ್ಥಿಗಳು ಶೇ.55) ಅಂಕ ಪಡೆದಿರಬೇಕು. 2020-21ರ ಶೈಕ್ಷಣಿಕ ವರ್ಷದಲ್ಲಿ ಪದವಿ ಪಡೆದ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಗರಿಷ್ಠ 30 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಎಸ್ಸಿ, ಎಸ್ಟಿ, ಅಂಗವಿಕಲ, ಕೋಲ್ ಇಂಡಿಯಾ ಲಿಮಿಟೆಡ್ನ ಸಿಬ್ಬಂದಿ ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 1,180 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಮಾಸಿಕ 50,000-1,60,000 ರೂ.ವರೆಗೆ ವೇತನ, ಡಿಎ, ಮನೆ ಬಾಡಿಗೆ ಭತ್ಯೆ, ಪಿಆರ್ಪಿ, ವೈದ್ಯಕೀಯ ಸೌಲಭ್ಯ, ಗ್ರಾಚುಟಿ, ಸಿಎಂಪಿಎಫ್, ಸಿಎಂಪಿಎಸ್, ಸಿಐಎಲ್ ಪೆನ್ಷನ್ಗಳನ್ನೂ ನೀಡಲಾಗುವುದು.
ಅಧಿಸೂಚನೆಗೆ: https://bit.ly/3fLPFFO
ಮಾಹಿತಿಗೆ: www.coalindia.inhttp://www.coalindia.in