

ಬೆಂಗಳೂರು: ಸರ್ಕಾರಿ ಸೇವೆಯಿಂದ ನಿವೃತ್ತರಾಗಿದ್ದು, ಇನ್ನೂ ಉದ್ಯೋಗ ಮಾಡುವ ಹುಮ್ಮಸ್ಸು ಇರುವ ಅಭ್ಯರ್ಥಿಗಳಿಗಾಗಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆವಿಕಂ) ಅವಕಾಶ ನೀಡುತ್ತಿದೆ.
ಬೆಸ್ಕಾಂನಲ್ಲಿ ಖಾಲಿ ಇರುವ 10 ‘ವಿಚಾರಣಾಧಿಕಾರಿ’ ಹುದ್ದೆಗೆ ನೇಮಕ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿದ್ದು, ಈ ಹುದ್ದೆಗಳಿಗೆ ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ, ನಿವೃತ್ತ ಇಂಜಿನಿಯರ್ಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
2022ರ ಡಿಸೆಂಬರ್ 31ರ ವರೆಗೆ ಸೀಮಿತ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಬೆಂವಿಕಂಗೆ ಸಂಬಂಧಿಸಿದ ಸಿಬ್ಬಂದಿ ಕುರಿತಾದ ಹಾಗೂ ವಿದ್ಯುತ್ ಅಪಘಾತಗಳ ಬಗ್ಗೆ ಪಾರದರ್ಶಕ ಹಾಗೂ ನಿಷ್ಪಕ್ಷಪಾತವಾದ ಇಲಾಖಾ ವಿಚಾರಣೆ ನಡೆಸುವುದು ವಿಚಾರಣಾಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ. ಗರಿಷ್ಠ 70 ವರ್ಷ ವಯೋಮಿತಿ ನಿಗದಿಯಾಗಿದ್ದು, ನಿವೃತ್ತ ಅಧಿಕಾರಿಗಳು ಬೆಂಗಳೂರು/ ಬೆಂವಿಕಂ ವ್ಯಾಪ್ತಿಯ (ಬೆಂಗಳೂರು ನಗರ/ ಗ್ರಾಮೀಣ, ರಾಮನಗರ, ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ) ನಿವಾಸಿಗಳಾಗಿರಬೇಕು. ಪ್ರತಿ ಪ್ರಕರಣಕ್ಕೆ ಸಂಬಂಧಿಸಿದಂತೆ 12,000 (ಪ್ರಾಥಮಿಕ ವಿಚಾರಣಾ ವರದಿ), 30,000 ರೂ. (ಪೂರ್ಣ ವಿಚಾರಣಾ ವರದಿ) ಹಾಗೂ ವಾಹನ ಭತ್ಯೆ ಪ್ರತಿ ಕಿ.ಮೀ.ಗೆ 12 ರೂ. ನೀಡಲಾಗುವುದು.
ಅರ್ಜಿ ಸಲ್ಲಿಕೆ ವಿಳಾಸ: ಪ್ರಧಾನ ವ್ಯವಸ್ಥಾಪಕರು (ಆಡಳಿತ ಮತ್ತು ಮಾನವ ಸಂಂಪನ್ಮೂಲ), ಬೆಳಕು ಭವನ, ಕಂಪನಿ ಕಾರ್ಯಾಲಯ, ಬೆವಿಕಂ, ಕೆ.ಆರ್.ವೃತ್ತ, ಬೆಂಗಳೂರು-560001
ಅಧಿಸೂಚನೆಗೆ: https://bit.ly/2WF0HGB