3 ವರ್ಷಗಳ ಹಿಂದೆ ಕೊಲೆಯಾಗಿದ್ದ ವ್ಯಕ್ತಿ ಪತ್ತೆ!

crime
Published on

ಬರೇಲಿ: ರೈಲಿನಲ್ಲಿ ನಡೆದ ಮೊಬೈಲ್ ಕಳ್ಳತನದ ವಿಚಾರವಾಗಿ ನಡೆದ ಜಗಳದಲ್ಲಿ 3 ವರ್ಷಗಳ ಹಿಂದೆ ಕೊಲೆಯಾಗಿದ್ದ ಎನ್ನಲಾದ ವ್ಯಕ್ತಿ ಇತ್ತೀಚೆಗೆ ಬಿಹಾರದಲ್ಲಿ ಜೀವಂತವಾಗಿ ಪತ್ತೆಯಾಗಿದ್ದು, ಕೊಲೆ ಆರೋಪ ಹೊತ್ತು ಜೈಲು ಪಾಲಾಗಿದ್ದ ಅಯೋಧ್ಯೆ ನಿವಾಸಿಯನ್ನು ಇದೀಗ ಜೈಲಿನಿಂದ ಬಿಡುಗಡೆಗೊಳಿಸಲಾಗಿದೆ.

2022ರ ಡಿಸೆಂಬರ್​ನಲ್ಲಿ ದೆಹಲಿ ಅಯೋಧ್ಯಾ ಎಕ್ಸ್​ಪ್ರೆಸ್ ರೈಲಿನಲ್ಲಿ ಶಹಜಾನ್ಪುರ ಜಿಲ್ಲೆ ವ್ಯಾಪ್ತಿಯಲ್ಲಿ ಆಯೋಧ್ಯೆಯ ಖೇಮರಾಯ ಗ್ರಾಮದ ನರೇಂದ್ರ ದುಬೆ ಹಾಗೂ ಬಿಹಾರ ಮೂಲದ ವ್ಯಕ್ತಿಯ ನಡುವೆ ಮೊಬೈಲ್ ಕಳ್ಳತನದ ವಿಚಾರವಾಗಿ ಜಗಳವಾಗಿತ್ತು. ಇದಾದ ಬಳಿಕ ನರೇಂದ್ರ ದುಬೆ ಬಿಹಾರ ಮೂಲದ ವ್ಯಕ್ತಿಯನ್ನು ರೖಲಿನಿಂದ ತಳ್ಳಿ ಕೊಲೆ ಮಾಡಿದ್ದಾನೆ ಎಂಬ ಪ್ರತ್ಯಕ್ಷದರ್ಶಿಗಳ ಹೇಳಿಕೆ ಆಧಾರದ ಮೇರೆಗೆ ಆತನನ್ನು ಬಂಧಿಸಲಾಗಿತ್ತು. ಕಳೆದ ಕೆಲ ದಿನಗಳ ಹಿಂದೆ ಕೊಲೆಯಾಗಿದ್ದ ಎನ್ನಲಾದ ವ್ಯಕ್ತಿಯು ಆತನ ಸಹೋದರಿ ಜತೆ ಇರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೊಲೀಸರಿಗೆ ಲಭ್ಯವಾಗಿದೆ. ವಿಡಿಯೋ ಬಗ್ಗೆ ತಿಳಿದ ಶಹಜಾನ್ಪುರ ನ್ಯಾಯಾಲಯವು ವ್ಯಕ್ತಿಯನ್ನು ವೈಯಕ್ತಿಕವಾಗಿ ಕೋರ್ಟ್ ಮುಂದೆ ಹಾಜರುಪಡಿಸಲು ಆದೇಶಿಸಿತು. ಆತನ ಹಾಜರಾತಿ ಬಳಿಕ ಆರೋಪಿಯನ್ನು ಬಿಡುಗಡೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net