

ಕೋಲ್ಕತ್ತಾ: ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಸೇತುವೆ ಹತ್ತಿ ಕೆಳಗೆ ಇಳಿಯಲು ನಿರಾಕರಿಸಿದ್ದ. ಈ ವೇಳೆ ಪೋಲೀಸರು ಆ ವ್ಯಕ್ತಿಗೆ ಆಮಿಷವೊಡ್ಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶವನ್ನು ಮರೆತು ತಕ್ಷಣ ಕೆಳಗಿಳಿದಿದ್ದಾನೆ. ಈ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.
ಕೋಲ್ಕತ್ತಾ ಪೊಲೀಸರು ವ್ಯಕ್ತಿಯೊಬ್ಬ ಕೆಲವು ವಿಚಾರವಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದನು. ಎತ್ತರದಲ್ಲಿರುವ ಸೇತುವೆಯನ್ನು ಹತ್ತಿ ಕೇಳಗೆ ಬಿಳಲು ನಿರ್ಧರಿಸಿದ್ದನು. ಆತನಿಗೆ ನಾವು ಉದ್ಯೋಗದ ಭರವಸೆ ನೀಡಿ ಬಿರಿಯಾನಿ ಪ್ಯಾಕೆಟ್‌ನೊಂದಿಗೆ ಆಮಿಷ ಒಡ್ಡಲಾಯ್ತು. ನಂತರ ಸಾಯುವ ನಿರ್ಧಾರವನ್ನು ಕೈ ಬಿಟ್ಟು ಸೇತುವೆಯಿಂದ ಕೇಳಗೆ ಇಳಿದಿದ್ದಾನೆಂದು ಕರಾಯ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಸೇತುವೆ ಮೇಲೆ ವ್ಯಕ್ತಿ ಹತ್ತಿದ ಕಾರಣ ನಗರದ ಅತ್ಯಂತ ಜನನಿಬಿಡ ರಸ್ತೆಯೊಂದರಲ್ಲಿ ಸುಮಾರು ಅರ್ಧ ಗಂಟೆ ಟ್ರಾಫಿಕ್ ಜಾಮ್ ಆಗಿತ್ತು. 40 ವರ್ಷದ ವ್ಯಕ್ತಿ ತನ್ನ ಹೆಂಡತಿಯಿಂದ ಬೇರ್ಪಡುವಿಕೆ ಮತ್ತು ವ್ಯವಹಾರದಲ್ಲಿ ನಷ್ಟದ ಕಾರಣದಿಂದ ಆರ್ಥಿಕವಾಗಿ ಒತ್ತಡಕ್ಕೊಳಗಾಗಿದ್ದಾನೆ ಮತ್ತು ತೀವ್ರ ಭಾವನಾತ್ಮಕ ಒತ್ತಡಕ್ಕೆ ಒಳಗಾಗಿದ್ದನು. ಈ ಕಾರಣದಿಂದಾಗಿ ಅವನು ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದನು, ಆದರೆ ಪೊಲೀಸರ ತಿಳುವಳಿಕೆಯು ಅವನ ಜೀವ ಉಳಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯ ವಿಡಿಯೋವನ್ನು ಪಿಟಿಐ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಇದನ್ನು ಸಾವಿರಾರು ಬಾರಿ ವೀಕ್ಷಿಸಲಾಗಿದೆ. ಆ ವ್ಯಕ್ತಿ ಬಿರಿಯಾನಿ ಹೆಸರಲ್ಲಿ ಒಪ್ಪಿ ಆತ್ಮಹತ್ಯೆ ಮಾಡಿಕೊಳ್ಳುವ ಇಂಗಿತವನ್ನು ಹೇಗೆ ಮುಂದೂಡಿದ ಎಂದು ತಿಳಿದು ಜನರು ಅಚ್ಚರಿಗೊಂಡಿದ್ದಾರೆ.