ಊಟದೊಂದಿಗೆ ಸಲಾಡ್​ ಕೊಡಲಿಲ್ಲ ಎಂದು ಹೆಂಡತಿಯನ್ನು ಕೊಂದೇ ಹಾಕಿದ ಗಂಡ!

murder
Published on

ಲಖನೌ: ಊಟದ ಜತೆಗೆ ಸಲಾಡ್​ ಕೊಡಲಿಲ್ಲ ಎನ್ನುವ ಕಾರಣಕ್ಕೆ ಪತಿ, ಪತ್ನಿಯನ್ನೇ ಕೊಂದಿರುವ ಘಟನೆ ಉತ್ತರ ಪ್ರದೇಶದ ಗೋಗ್ವಾನ್ ಜಲಾಲ್‌ಪುರ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ದಂಪತಿಯ ಮಗನಿಗೂ ಗಂಭೀರ ಗಾಯವಾಗಿರುವುದಾಗಿ ಹೇಳಲಾಗಿದೆ.

ಮಂಗಳವಾರ ರಾತ್ರಿ ಮುರುಳಿ ಕುಮಾರ್​ ಹೆಸರಿನ ವ್ಯಕ್ತಿ ಕಂಠ ಪೂರ್ತಿ ಕುಡಿದು ಮನೆಗೆ ಬಂದಿದ್ದಾನೆ. ಊಟ ಕೊಡಲು ಮುಂದಾದ ಹೆಂಡತಿ ಸುದೇಶ ದೇವಿ ಬಳಿ ನನಗೆ ಸಲಾಡ್​ ಕೊಡು ಎಂದು ಕೇಳಿದ್ದಾನೆ. ಆದರೆ ಸಲಾಡ್​ ಮಾಡಿಲ್ಲ ಎಂದು ಹೆಂಡತಿ ಹೇಳಿದ ಕಾರಣಕ್ಕೆ ದಂಪತಿ ನಡುವೆ ಜಗಳ ಆರಂಭವಾಗಿದೆ. ಜಗಳ ಹೆಚ್ಚಾದ ನಂತರ ಮುರುಳಿ ಮನೆಯಿಂದ ಹೊರ ನಡೆದಿದ್ದಾನೆ.

ಅದಾದ ಸ್ವಲ್ಪ ಸಮಯದಲ್ಲಿ ಹೆಂಡತಿ ಮಲಗಿದ್ದ ವೇಳೆ ಮುರುಳಿ ವಾಪಾಸು ಮನೆಗೆ ಬಂದಿದ್ದಾನೆ. ಮಲಗಿದ್ದ ಹೆಂಡತಿಗೆ ಮನಸೋಇಚ್ಛೆ ಹೊಡೆಯಲಾರಂಭಿಸಿದ್ದಾನೆ. ಹೆಂಡತಿ ಸಾಯುವ ಮಟ್ಟಕ್ಕೆ ಆಕೆಗೆ ಹೊಡೆದಿದ್ದಾನೆ. ಈ ವೇಳೆ ಅಡ್ಡಬಂದ 22 ವರ್ಷದ ಮಗ ಅಜಯ್​ ಮೇಲೂ ಹಲ್ಲೆ ಮಾಡಿದ್ದಾನೆ. ತಕ್ಷಣ ಹೆಂಡತಿ ಮತ್ತು ಮಗನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆಕೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಸದ್ಯ ಅಜಯ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net