ಮಹಿಳೆಯ ಮುಖ ಮತ್ತು ಖಾಸಗಿ ಭಾಗಕ್ಕೆ ಸ್ಕ್ರೂಡ್ರೈವರ್‌ನಿಂದ 30 ಬಾರಿ ಹೊಡೆದು ಕೊಲೆ ಮಾಡಿದ ಕಿರಾತಕ: ಕಾರಣ ಕೇಳಿದ್ರೆ ಶಾಕ್​! | Murdered

dk - 2025-06-03T190714.389
Published on

Murdered: ತನ್ನ 20 ವರ್ಷದ ಗೆಳತಿ ಮುಖಕ್ಕೆ ಹಾಗೂ ಖಾಸಗಿ ಭಾಗಗಳಲ್ಲಿ ಬರೊಬ್ಬರಿ ಮೂವತ್ತು ಬಾರಿ ಹೊಡೆದು ಆಕೆಯನ್ನು ಕೊಲೆ ಮಾಡಿದ ಘಟನೆ ಉತ್ತರಪ್ರದೇಶದ ಮೊರಾಬಾದ್​ನಲ್ಲಿ ಇತ್ತೀಚಿಗೆ ನಡೆದಿದೆ.

ಬಾಲಕಿಯ ಮರಣೋತ್ತರ ಪರೀಕ್ಷೆಯ ವರದಿಯು ಆಕೆಯ ಮೇಲೆ 30 ಕ್ಕೂ ಹೆಚ್ಚು ಬಾರಿ ಸ್ಕ್ರೂಡ್ರೈವರ್‌ನಿಂದ ಹಲ್ಲೆ ನಡೆಸಲಾಗಿದೆ ಎಂದು ದೃಢಪಡಿಸಿದೆ. ಇದಲ್ಲದೆ, ಬಾಲಕಿಯ ಮುಖ ಮತ್ತು ಖಾಸಗಿ ಭಾಗಗಳಲ್ಲಿ ಗಾಯದ ಗುರುತುಗಳು ಸಹ ಕಂಡುಬಂದಿವೆ. ಆರೋಪಿ ಯುವಕ ರಫಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ.

ಕೊಲೆ ಮಾಡಲು ಕಾರಣ ಏನು..?

ಶಫಿನಾ ಎಂಬ ಮಹಿಳೆ ತನ್ನ 20 ವರ್ಷದ ಮಗಳ ಜತೆ ಮೊರಾಬಾದ್​ನಲ್ಲಿ ವಾಸುತ್ತಿದ್ದಾರೆ. ಜೂ.1ರಂದು ತನ್ನ ಮಗಳು ಕಾಣೆಯಾಗಿದ್ದಾಳೆ. ಆಕೆಯನ್ನು ಹುಡುಕುತ್ತಾ ಹೋದ ಶಫಿನಾಗೆ ಶಾಕ್​ಗೆ ಒಳಗಾಗಿ ನೆಲಕ್ಕೆ ಕುಸಿದು ಬಿದ್ದು, ಚಿರುತ್ತಾ ಅಳ ತೋಡಗಿದ್ದಾರೆ. ಮಗಳ ಜಮೀನೊಂದರಲ್ಲಿ ರಕ್ತದ ಮಡುವಿನಲ್ಲಿ ತನ್ನ ಮಗಳ ದೇಹ ಬಿದ್ದಿರುವುದು ನೋಡಿ ದಿಗ್ಭ್ರಮೆಗೊಂಡಿದ್ದಾಳೆ. ಸಲ್ಪ ಸಮಯದಲ್ಲೇ ಮಗಳ ಕೊಲೆ ಬಗ್ಗೆ ಗ್ರಾಮಕ್ಕೆ ಗೊತ್ತಾಗಿದೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ಪರೀಕ್ಷೆಗೆ ಕಳುಹಿಸದ್ದಾರೆ. ವರದಿಯಲ್ಲಿ 30 ಬಾರಿ ಸ್ಕ್ರೂಡ್ರೈವರ್‌ನಿಂದ ಹೊಡೆದು ಕೊಲೆಯಾದ ಮಾಹಿತಿ ಸಿಕ್ಕಿದೆ.

ಕೊಲೆಯ ಜಾಲ ಹಿಡಿದ ಪೊಲೀಸರಿಗೆ ಕೊನೆಗೂ ರಫಿ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಆತನನ್ನು ಹಿಡಿದು ವಿಚಾರಣೆ ಮಾಡಿದಾಗ ಕೊಲೆ ಮಾಡಿದ ಬಗ್ಗೆ ಆರೋಪಿ ಬಾಯ್ಬಿಟ್ಟಿದ್ದಾನೆ. ಇಬ್ಬರು ಪ್ರೀತಿ ಮಾಡುವುದರ ಬಗ್ಗೆ ಹೇಳಿದ ಆತ, ಪ್ರೀತಿಯ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಇದೇ ಕೋಪದಲ್ಲಿ ಇತ ಮರು ದಿನ ಭೇಟಿ ಮಾಡುವ ನೆಪದಲ್ಲಿ ಆಕೆಯನ್ನು ಕರೆಸಿಕೊಂಡು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net