8ನೇ ಮಹಡಿಯಲ್ಲಿ ನೇತಾಡುತ್ತಿದ್ದ ಮಗುವಿನ ರಕ್ಷಣೆ ಮಾಡಿದ ಯುವಕನ ಧೈರ್ಯಕ್ಕೆ ಭಾರೀ ಮೆಚ್ಚುಗೆ: ವಿಡಿಯೋ ವೈರಲ್​

Kid Save
Published on

ಕಜಕಿಸ್ತಾನ್​: ಮೂರು ವರ್ಷದ ಮಗುವೊಂದು 8ನೇ ಮಹಡಿಯ ಕಿಟಕಿಯಲ್ಲಿ ನೇತಾಡುತ್ತಿದ್ದನ್ನು ಗಮನಿಸಿ ಕೂಡಲೇ ಮಗುವನ್ನು ರಕ್ಷಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.

ಕಸಜಿಸ್ತಾನದಲ್ಲಿ ಈ ಘಟನೆ ನಡೆದಿದ್ದು, ರಕ್ಷಣೆ ಮಾಡುವ ಸಲುವಾಗಿ ಈ ಯುವಕ 100 ಅಡಿಯಷ್ಟು ಎತ್ತರಕ್ಕೆ ಹತ್ತಿ ಕಿಟಕಿಯಲ್ಲಿ ನೇತಾಡುತ್ತಿದ್ದ ಮಗವನ್ನು ಕೆಳಗಿಳಿಸಿ ಪ್ರಾಣ ರಕ್ಷಿಸಿದ್ದಾನೆ.

ಈ ಮಗು 8ನೇ ಮಹಡಿಯಲ್ಲಿ ನೇತಾಡುತ್ತಿದ್ದದ್ದನ್ನು ಹೇಗೋ ಗಮನಿಸಿದ ಯುವಕ ಸ್ವಲ್ಪವೂ ತಡಮಾಡದೇ ಚಾಣಾಕ್ಷತನದಿಂದ  ಮಗುವನ್ನು ಕೆಳಗಿಳಿಸಿದ್ದಾನೆ. ಸ್ವಲ್ಪ ಎಚ್ಚರ ತಪ್ಪಿದರೂ ಮಗುವಿನ ಪ್ರಾಣಕ್ಕೆ ಕುತ್ತು ಬರುತ್ತಿತ್ತು. ದೇವರಂತೆ ಬಂದ ಈ ಯುವಕ ಮಗುವನ್ನು ರಕ್ಷಿಸಿದ್ದಾನೆ.

ಬಹುಮಹಡಿ ಕಟ್ಟಡದ ಎಂಟನೇ ಮಹಡಿಯಲ್ಲಿ ನೇತಾಡುತ್ತಾ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಪುಟ್ಟ ಮಗುವನ್ನು ಯುವಕನೊಬ್ಬ ರಕ್ಷಣೆ ‌ಮಾಡಿದ್ದಾನೆ. ಯುವಕನ ಈ ಕಾರ್ಯಕ್ಕೆ ಮೆಚ್ಚಿ ಕಜಕಿಸ್ತಾನ ಸಚಿವಾಲಯ ಸನ್ಮಾನಿಸಿ ಬಹುಮಾನವನ್ನು ನೀಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net