More

    ಅಂಡಮಾನ್​ಗೆ ಇಂದು ಮುಂಗಾರು

    ನವದೆಹಲಿ: ನೈಋತ್ಯ ಮುಂಗಾರು ಅಂಡ-ಮಾನ್​ ದ್ವೀಪಕ್ಕೆ ಸೋಮವಾರ ಪ್ರವೇಶಿಸಲಿದ್ದು, 24 ತಾಸಿನಲ್ಲಿ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ. ವಾಡಿಕೆಗಿಂತ ಎರಡು ವಾರ ಮೊದಲೇ ಮುಂಗಾರು ಪ್ರವೇಶ ಆಗಲಿದ್ದು, ಬಂಗಾಳ ಕೊಲ್ಲಿಯ ಆಗ್ನೇಯ ಭಾಗದ ಮೂಲಕ ದಣ ಅಂಡಮಾನ್​ ಸಮುದ್ರ ಮತ್ತು ನಿಕೋಬಾರ್​ ದ್ವೀಪವನ್ನು ತಲುಪಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

    ಕೇರಳ, ತಮಿಳುನಾಡು, ಮಾಹೆ ಮತ್ತು ಲಕ್ಷದ್ವೀಪಗಳಲ್ಲಿ ಇನ್ನೆರಡು ದಿನ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದ್ದು, ಕರ್ನಾಟಕದ ಕೆಲ ಭಾಗದಲ್ಲಿ ವರ್ಷಧಾರೆ ಸುರಿಯಬಹುದು. ಅರಬ್ಬಿ ಸಮುದ್ರದ ಮೇಲ್ಮೆನಿಂದ ಬಲವಾದ ಗಾಳಿ ಬೀಸುವ ಲಕ್ಷಣ ಇದೆ.

    ಮಾರ್ಚ್​ 1ರಿಂದ ಮೇ 14ರವರಗೆ ದಣ ಪರ್ಯಾಯ ದ್ವೀಪದಲ್ಲಿ 109 ಮಿ.ಮೀ. ದಾಖಲೆಯ ಮಳೆ ಆಗಿದೆ. ಈ ಅವಧಿಯಲ್ಲಿ ಸುರಿಯುವ ವಾಡಿಕೆಯ ಮಳೆಗಿಂತ ಶೇ. 43ರಷ್ಟು ಹೆಚ್ಚು ವರ್ಷಧಾರೆ ಈ ವರ್ಷ ಆಗಿದೆ. ಈ ಸಾರಿಯ ಪೂರ್ವ ಮುಂಗಾರಿನಲ್ಲಿ ಕರ್ನಾಟಕ ಶೇ. 82, ಅಂಡಮಾನ್​ ಮತ್ತು ನಿಕೋಬಾರ್​ ದ್ವೀಪ ಶೇ. 79, ಕೇರಳ ಶೇ. 73, ಪುದುಚೇರಿ ಶೇ. 59, ಲಕ್ಷದ್ವೀಪ ಶೇ. 39, ತಮಿಳುನಾಡು ಶೇ. 21ರಷ್ಟು ಮಳೆ ಕಂಡಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts