

ಬೆಂಗಳೂರು: ಈ ಹುಡುಗ ತುಂಬ ಮಹತ್ವಕಾಂಕ್ಷಿಯಾಗಿದ್ದ. ಆದರೆ ಗಡಿಬಿಡಿ ಮಾಡಿಕೊಂಡು, ಜೀವನದಲ್ಲೇ ಜಿಗುಪ್ಸೆ ಹೊಂದಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಉತ್ತರ ಕನ್ನಡ ಮೂಲಕ ಶಶಾಂಕ್(22) ಎಂಬಾತ ಬೆಂಗಳೂರಿನ ಜಯನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ. ಬಿಕಾಂ ಪದವೀಧರನಾದ ಈತನಿಗೆ ಮುಖ್ಯಮಂತ್ರಿ ಆಗುವ ಕನಸು ಇತ್ತು. ಅದು ಎಂದಿಗೂ ನನಸಾಗುವುದಿಲ್ಲ ಎಂದು ಹೇಳುತ್ತಿದ್ದ ಈತ ಅದೇ ಕಾರಣಕ್ಕೆ ಮನನೊಂದು, ಜೀವನದಲ್ಲೇ ಜಿಗುಪ್ಸೆಗೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ನಡುರಸ್ತೆಯಲ್ಲೇ ಹತ್ಯೆಯಾದ ಮಾಜಿ ಕ್ರಿಕೆಟಿಗನ ಸಹೋದರ..!
ಒಂದು ತಿಂಗಳ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ದ ಶಶಾಂಕ್ ತನ್ನ ಸ್ನೇಹಿತರೊಂದಿಗೆ ವಾಸವಾಗಿದ್ದ. ಕೆಲಸಕ್ಕಾಗಿ ತುಂಬ ಹುಡುಕಾಟ ನಡೆಸಿದ್ದರೂ ಎಲ್ಲಿಯೂ ಉದ್ಯೋಗ ಸಿಕ್ಕಿರಲಿಲ್ಲ. ಬುಧವಾರ ಬೆಳಗ್ಗೆ 7 ಗಂಟೆಗೆ ಗೆಳೆಯರು ಕೆಲಸಕ್ಕೆ ತೆರಳಿದ್ದರು. ಏಕಾಂಗಿಯಾಗಿದ್ದ ಶಶಾಂಕ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೆಲ ಹೊತ್ತಿನ ಬಳಿಕ ಶಶಾಂಕ್ ಮೊಬೈಲ್‌ಗೆ ಗೆಳೆಯರು ಕರೆ ಮಾಡಿದಾಗ ಕರೆ ಸ್ವೀಕರಿಸದ ಕಾರಣಕ್ಕೆ ಆತಂಕಗೊಂಡು ಕೊಠಡಿಗೆ ಬಂದಾಗ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಡೆತ್‌ನೋಟ್ ಸಿಕ್ಕಿಲ್ಲ.
ಕೆಲಸ ಸಿಗದೆ ಜಿಗುಪ್ಸೆಗೊಂಡಿದ್ದ ಶಶಾಂಕ್, ಸಿಎಂ ಆಗುವ ಗುರಿ ಹೊಂದಿದ್ದೇನೆ. ಆದರೆ ನನ್ನ ಬದುಕಿನ ಕನಸುಗಳು ಈಡೇರುವುದಿಲ್ಲ ಎಂದು ಸ್ನೇಹಿತರ ಜತೆ ಹಲವು ಬಾರಿ ಬೇಸರ ವ್ಯಕ್ತಪಡಿಸಿಕೊಂಡಿದ್ದ. ಕೆಲಸವೂ ಸಿಗದೆ..ಅತ್ತ ಸಿಎಂ ಆಗುವ ಕನಸೂ ನೆರವೇರದೆ ಇರುವುದರಿಂದ ಶಶಾಂಕ್ ಆತ್ಮಹತ್ಯೆ ದಾರಿ ತುಳಿದಿರಬಹುದು ಎಂದು ಪೊಲೀಸರು ಹೇಳಿದ್ದಾರೆ. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್)