ನಿನ್ನೆ ತಡರಾತ್ರಿ ದೆಹಲಿಯಲ್ಲಿ ನಾಲ್ವರ ಭೀಕರ ಕೊಲೆ: ಜನ್ಮಕೊಟ್ಟ ತಂದೆ-ತಾಯಿ, ಸಹೋದರಿ, ಅಜ್ಜಿಯನ್ನೇ ಕೊಂದ ಯುವಕ! ಬೆಚ್ಚಿಬಿದ್ದ ಸ್ಥಳೀಯರು

Palam Murder Case
Published on

ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿನ್ನೆ ತಡರಾತ್ರಿ(ಮಂಗಳವಾರ) ಭಯಾನಕ ಘಟನೆ ಸಂಭವಿಸಿದೆ. ಯುವಕನೊಬ್ಬ ತನ್ನ ಜನ್ಮಕೊಟ್ಟ ತಂದೆ-ತಾಯಿ, ಅಕ್ಕರೆ ತೋರುತ್ತಾ ಜತೆಯಲ್ಲೇ ಬೆಳೆದ ಸಹೋದರಿ, ಕೈ ತುತ್ತು ಕೊಟ್ಟು ಸಾಕಿದ ಅಜ್ಜಿಯನ್ನೇ ಕೊಂದಿದ್ದಾನೆ.

ನೈಋತ್ಯ ದೆಹಲಿಯ ಪಾಲಂ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. 25 ವರ್ಷದ ಕೇಶವ ಎಂಬಾತ ಕೊಲೆ ಆರೋಪಿ. ಈತನ ತಂದೆ ದಿನೇಶ್​ ಕುಮಾರ್​(42), ತಾಯಿ ದರ್ಶನ್​ ಸೈನಿ(40), ಸಹೋದರಿ ಊರ್ವಸಿ(23) ಮತ್ತು ಅಜ್ಜಿ ದೇವನೋ ದೇವಿ ಮೃತ ದುರ್ದೈವಿಗಳು. ಇಂದು ಬೆಳಗ್ಗೆ(ಬುಧವಾರ) ಆರೋಪಿ ಕೇಶವನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪ್ರಾಥಮಿಕ ತನಿಖಾ ವರದಿ ಪ್ರಕಾರ, ಆರೋಪಿ ಕೇಶವ ಮದ್ಯವ್ಯಸನಿಯಾಗಿದ್ದ. ಕೆಲಸಕ್ಕೆ ಹೋಗುತ್ತಿರಲಿಲ್ಲ. ಇದೇ ವಿಚಾರಕ್ಕೆ ಮನೆಯಲ್ಲಿ ಜಗಳ ಆಗುತ್ತಿತ್ತು ಎನ್ನಲಾಗಿದೆ. ಅಪ್ಪ-ಅಮ್ಮ, ಸಹೋದರಿ, ಅಜ್ಜಿಯನ್ನು ಚಾಕುವಿನಿಂದ ಇರಿದು ಅಮಾನುಷವಾಗಿ ಕೊಲೆ ಮಾಡಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net