ಮಲಗಿದ್ದ ಹೆಂಡತಿಯನ್ನು ಕೊಡಲಿಯಿಂದ ಕಡಿದು ಕೊಂದ!

crime
Published on

ಉತ್ತರಪ್ರದೇಶ: ಹೆಂಡತಿ ಗಂಡನನ್ನು, ಗಂಡ ಹೆಂಡತಿಯನ್ನು ಕೊಲೆ ಮಾಡುವ/ಮಾಡಿಸುವ ಪ್ರಕರಣಗಳು ಇದೀಗ ಹೆಚ್ಚಾಗುತ್ತಿದ್ದು, ಅಂಥ ಕೊಲೆಗಳ ಪಟ್ಟಿಗೆ ಇದೀಗ ಮತ್ತೊಂದು ಪ್ರಕರಣ ಸೇರಿಕೊಂಡಿದೆ. ಈ ಪ್ರಕರಣದಲ್ಲಿ ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಉತ್ತರಪ್ರದೇಶದ ಫತೆಪುರ್​ನ ಚೌಫರ್ವಾ ಎಂಬ ಗ್ರಾಮದಲ್ಲಿ ಈ ಭೀಕರ ಕೊಲೆ ನಡೆದಿದೆ. ಜಮುನಾದೇವಿ (50) ಪತಿಯಿಂದಲೇ ಕೊಲೆಗೀಡಾದ ಪತ್ನಿ. ರಾಮ್​ವಿಶಾಲ್ (52) ಕೊಲೆ ಆರೋಪಿ. ಇಲ್ಲಿನ ಸದಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಶನಿವಾರ ರಾತ್ರಿ ಮನೆ ಹೊರಗೆ ಇದ್ದ ಮಂಚದ ಮೇಲೆ ಮಲಗಿದ್ದ ಪತ್ನಿಯನ್ನು ಕೊಡಲಿಯಿಂದ ಕಡಿದು ರಾಮ್​ವಿಶಾಲ್​ ಕೊಲೆ ಮಾಡಿದ್ದಾನೆ. ಪರಿಣಾಮವಾಗಿ ಆಕೆ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ. ಈ ಪ್ರಕರಣದಲ್ಲಿ ಪೊಲೀಸರು ಆರೋಪಿ ಪತಿಯನ್ನು ಬಂಧಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕೊಲೆಗೆ ಕಾರಣ ಏನು ಎಂಬ ಕುರಿತು ಖಚಿತ ಮಾಹಿತಿ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net