

Gorilla: ಮಹಿಳೆಯೊಬ್ಬಳು ಸಫಾರಿ ಪ್ರಾಣಿಗಳೊಂದಿಗೆ ಮುಖಾಮುಖಿಯಾಗುವ ಹಾಸ್ಯಮಯ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಕೆಲವು ಪ್ರವಾಸಿಗರು ಪರ್ವತಗಳಲ್ಲಿ ಪ್ರವಾಸ ಮಾಡುತ್ತಿರುವಾಗ, ಕಾಡು ಗೊರಿಲ್ಲಾಗಳನ್ನು ಎದುರಾಗಿವೆ. ಹಾಸ್ಯಮಯ ಸಂಗತಿಯೇನೆಂದರೆ ಗಂಡು ಗೊರಿಲ್ಲಾವೊಂದು ಮಹಿಳೆಯ ಕೂದಲನ್ನು ಹಿಡಿದು ನಂತರ ತನ್ನ ಹೆಣ್ಣು ಗೊರಿಲ್ಲಾ ಅವನನ್ನು ಹೊಡೆಯುವುದು ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಎರಡು ಗೊರಿಲ್ಲಾಗಳು ಕಾಡಿನಲ್ಲಿ ತಮ್ಮ ಸಮಯವನ್ನು ಕಳೆಯುವುದನ್ನು ಕಾಣಬಹುದು. ಒಬ್ಬ ಮಹಿಳಾ ಪ್ರವಾಸಿ ಗಂಡು ಗೊರಿಲ್ಲಾ ಹತ್ತಿರ ಬಂದಾಗ ಇದ್ದಕ್ಕಿದ್ದಂತೆ ಅದು ಅವಳ ಕೂದಲನ್ನು ಹಿಡಿಯುತ್ತದೆ, ಸ್ವಲ್ಪ ದೂರದಿಂದಲೇ ಎಲ್ಲವನ್ನೂ ಗಮನಿಸುತ್ತಿದ್ದ ಹೆಣ್ಣು ಗೊರಿಲ್ಲಾ ನಾಟಕೀಯವಾಗಿ ಉರುಳಿ ಬಂದು ಗಂಡು ಗೊರಿಲ್ಲಾವನ್ನು ನೋಡುತ್ತದೆ. ಹುಡುಗಿಯ ಕೂದಲಿನಿಂದ ಅವನು ತನ್ನ ಹಿಡಿತವನ್ನು ಸಡಿಲಿಸಿದ ತಕ್ಷಣ, ಹೆಣ್ಣು ಗೊರಿಲ್ಲಾ ಗಂಡು ಗೊರಿಲ್ಲಾಗೆ ಹೊಡೆಯಲು ಪ್ರಾರಂಭಿಸುತ್ತದೆ.
ಇಲ್ಲಿದೆ ವಿಡಿಯೋ
@rose_k01 ಎಂಬ ಹೆಸರಿನ X ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಸುಮಾರು 14 ಮಿಲಿಯನ್ ಜನರು ಇದನ್ನು ವೀಕ್ಷಿಸಿದ್ದಾರೆ. ಈ ವಿಡಿಯೋಗೆ ಒಬ್ಬ ಬಳಕೆದಾರ "ಹೆಣ್ಣು ಗೊರಿಲ್ಲಾ: ಇನ್ನೊಂದು ಹೆಣ್ಣು ಗೊರಿಲ್ಲಾ ಕೂದಲನ್ನು ಮುಟ್ಟಲು ನಿಮಗೆ ಎಷ್ಟು ಧೈರ್ಯ.... ಗಂಡು ಗೊರಿಲ್ಲಾ: ಅದು ಹೆಣ್ಣು ಗೊರಿಲ್ಲಾ ಅಲ್ಲ, ನೀವು ಹೆಣ್ಣು ಗೊರಿಲ್ಲಾ... ಹೆಣ್ಣು ಗೊರಿಲ್ಲಾ: ಏನು??? ಇಲ್ಲಿಗೆ ಬನ್ನಿ, ನೀವು..." ಎಂದು ಇಬ್ಬರ ನಡುವಿನ ಸಂಭಾಷಣೆಯನ್ನು ಊಹಿಸಿ ಹಾಸ್ಯಮಯವಾಗಿ ಬರೆದರೆ, ಮತ್ತೊಬ್ಬರು, "ಜಾತಿ ಯಾವುದೇ ಆಗಿರಲಿ... ಮಹಿಳೆಯರು ಇದನ್ನು ಎಂದಿಗೂ ಸಹಿಸುವುದಿಲ್ಲ.." ಎಂದು ಬರೆದಿದ್ದಾರೆ. (ಏಜೆನ್ಸೀಸ್)