9 ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಕಾಂಗ್ರೆಸ್​ ನಾಯಕ ಮಾಣಿಕ್​ರಾವ್​ ಗವಿತ್​ ಇನ್ನಿಲ್ಲ

manikrao-gavit
Published on

ಮುಂಬೈ: ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್​ನ ಹಿರಿಯ ನಾಯಕ ಮಾಣಿಕ್​ರಾವ್​ ಗವಿತ್​ ಅವರು ಶನಿವಾರ ನಿಧನರಾದರು. ಇವರಿಗೆ 87 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಮಹಾರಾಷ್ಟ್ರದ ನಾಸಿಕ್​ನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ನಂದೂರ್ಬಾರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಮಾಣಿಕ್​ರಾವ್​ ಗವಿತ್​ ಅವರು 9 ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. 2014ರ ಚುನಾವಣೆಯಲ್ಲಿ ಸೋತಿದ್ದರು. ಮಾಣಿಕ್​ರಾವ್​ ಗವಿತ್ ಅವರು 2004ರಲ್ಲಿ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಕೇಂದ್ರ ಗೃಹ ರಾಜ್ಯ ಸಚಿವರಾಗಿ ಮತ್ತು 2013ರಲ್ಲಿ ರಾಜ್ಯ ಸಾಮಾಜಿಕ ನ್ಯಾಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ಮಾಣಿಕ್​ರಾವ್​ ಗವಿತ್​ ಅವರ ಮಗ ಮತ್ತು ಮಗಳೂ ರಾಜಕೀಯದಲ್ಲಿದ್ದಾರೆ. ಇಗತ್ಪುರಿಯಿಂದ 2009 ಮತ್ತು 2014ರಲ್ಲಿ ಎರಡು ಬಾರಿ ಕಾಂಗ್ರೆಸ್ ಶಾಸಕಿಯಾಗಿ ಪುತ್ರಿ ನಿರ್ಮಲಾ ಗವಿತ್​ ಆಯ್ಕೆಯಾಗಿದ್ದರು. ಶಿವಸೇನೆಗೆ ಸೇರಿದ 2019ರಲ್ಲಿ ಪರಾಭವಗೊಂಡರು. ಇನ್ನು ಗವಿತ್​ರ ಪುತ್ರ ಭರತ್, 2019ರಲ್ಲಿ ಕಾಂಗ್ರೆಸ್​ನಿಂದ ಟಿಕೆಟ್ ಕೊಡಲಿಲ್ಲವೆಂದು ಬೇಸತ್ತು ಬಿಜೆಪಿಗೆ ಸೇರ್ಪಡೆಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net