ಶಾಲೆಗೆ ಹೊರಟಿದ್ದ ಬಾಲಕಿ ನಿವೃತ್ತ ಮುಖ್ಯಶಿಕ್ಷಕರ ತೋಟದ ಬಾವಿಯಲ್ಲಿ ಶವವಾಗಿ ಪತ್ತೆ!

death
Published on

ಮಾಗಡಿ: ಶಾಲೆಗೆ ಹೋಗಬೇಕಿದ್ದ ಬಾಲಕಿ ನಿವೃತ್ತ ಮುಖ್ಯ ಶಿಕ್ಷಕರೊಬ್ಬರ ತೋಟದ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ.

ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಅಗಲಕೋಟೆ ಹ್ಯಾಂಡ್​ಪೋಸ್ಟ್​ ಬಳಿಯ ತಿಟ್ಟಮೇಗಲಪಾಳ್ಯದ ಯಶೋದಮ್ಮ ಎಂಬುವರ ದ್ವಿತೀಯ ಪುತ್ರಿ ಲಕ್ಷ್ಮೀ(14) ಮೃತ ದುರ್ದೈವಿ. ಸಾತನೂರು ಪ್ರೌಢಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಲಕ್ಷ್ಮೀ, ಸೋಮವಾರ ಬೆಳಗ್ಗೆ ಮನೆಯಿಂದ ಶಾಲೆಗೆ ಹೋದವಳು ಮನೆಗೆ ವಾಪಸಾಗಿರಲಿಲ್ಲ.

ಗಾಬರಿಗೊಂಡ ತಾಯಿ ಯಶೋದಮ್ಮ, ಮಗಳಿಗಾಗಿ ಗ್ರಾಮದಲ್ಲಿ ಹುಡುಕಿದರೂ ಪತ್ತೆಯಾಗಲಿಲ್ಲ. ಬಳಿಕ ಮಾಗಡಿ ಠಾಣೆಗೆ ದೂರು ನೀಡಿದ್ದರು. ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಗ್ರಾಮದಿಂದ 1 ಕಿ.ಮೀ. ದೂರದ ದೊಣಕುಪ್ಪೆ ಗ್ರಾಮದ ನಿವೃತ್ತ ಮುಖ್ಯಶಿಕ್ಷಕ ಗಂಗರಾಯಿ ಎಂಬುವವರ ತೋಟದಲ್ಲಿರುವ ಬಾವಿಯಲ್ಲಿ ಬಾಲಕಿ ಶವ ಪತ್ತೆಯಾಗಿದೆ. ಇದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದ್ದು, ನಾಗೇಶ ಎಂಬಾತನ ಮೇಲೆ ಅನುಮಾನ ವ್ಯಕ್ತಪಡಿಸಿ ಯಶೋದಮ್ಮ ದೂರು ನೀಡಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಅಥವಾ ಪ್ರೀತಿ ಮಾಡುವಂತೆ ಹಿಂಸೆ ಕೊಟ್ಟು ಬಾಲಕಿಯನ್ನು ಬಾವಿಗೆ ತಳ್ಳಿರಬಹುದು ಎಂಬ ಶಂಕೆ. ಹಲವು ತಿಂಗಳ ಹಿಂದೆ ನಾಗೇಶ್ ಎಂಬಾತಬಾಲಕಿಯನ್ನು ಪ್ರೀತಿಸುವಂತೆ ಕಿರುಕುಳ ಕೊಡು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net