ನೇಣುಬಿಗಿದ ಸ್ಥಿತಿಯಲ್ಲಿ ಮಾಗಡಿ ಕಂಚುಗಲ್ ಬಂಡೇ ಮಠದ ಸ್ವಾಮೀಜಿ ಶವ ಪತ್ತೆ! ಭಕ್ತರಲ್ಲಿ ಆತಂಕ

bande math swamji
Published on

ಮಾಗಡಿ: ರಾಮನಗರ ಜಿಲ್ಲೆಯ ಪುರಾತನ ಮಠಗಳಲ್ಲಿ ಒಂದಾದ ಮಾಗಡಿಯ ಕಂಚುಗಲ್ ಬಂಡೇ ಮಠದ ಪೀಠಾಧ್ಯಕ್ಷ ಶ್ರೀ ಬಸವಲಿಂಗ ಸ್ವಾಮೀಜಿ (45) ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿದ್ದು, ಭಕ್ತರಲ್ಲಿ ಆತಂಕ ಮೂಡಿದೆ.

ಕಂಚುಗಲ್​ ಬಂಡೇ ಮಠದ ಶ್ರೀ ಮಹಾಲಿಂಗೇಶ್ವರ ಸ್ವಾಮಿ ದೇವಾಲಯದ ಎದುರಿಗೆ ಇರುವ ಕೊಠಡಿಯಲ್ಲಿ ಶ್ರೀಗಳು ರಾತ್ರಿ ತಂಗಿದ್ದರು. ಆದರೆ ಸೋಮವಾರ ಮುಂಜಾನೆ ಎಂದಿನ ಸಮಯಕ್ಕೆ ಸ್ವಾಮೀಜಿ ಹೊರಗೆ ಬಾರದಿದ್ದರಿಂದ ಆತಂಕಗೊಂಡ ಅಲ್ಲಿಯೇ ಇದ್ದ ಕೆಲವು ವಿದ್ಯಾರ್ಥಿಗಳು ಹೋಗಿ ನೋಡಲಾಗಿ, ಸ್ವಾಮೀಜಿ ಅವರ ಮೃತ ದೇಹ ಕಿಟಕಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಡೆತ್​ನೋಟ್ ಪತ್ತೆ: ಲಭ್ಯ ಮಾಹಿತಿ ಪ್ರಕಾರ ಶ್ರೀಗಳು ಡೆತ್​ನೋಟ್​ ಬರೆದಿಟ್ಟಿದ್ದು, ಇದರಲ್ಲಿ ಏನಿದೆ? ಎನ್ನುವುದು ಇನ್ನು ಬಹಿರಂಗಗೊಂಡಿಲ್ಲ, ಈ ಪತ್ರ ಘಟನಾ ಸ್ಥಳದಲ್ಲಿ ಪೊಲೀಸರಿಗೆ ಲಭ್ಯವಾಗಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಕುದೂರು ಪೊಲೀಸ್​ ಠಾಣೆ ಸಿಪಿಐ ಕುಮಾರ್​ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ವಾಮೀಜಿ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ವಿವಿಧ ಮಠಗಳ ಸ್ವಾಮೀಜಿಗಳು ಹಾಗೂ ಸಾವಿರಾರು ಭಕ್ತರು ಮಠಕ್ಕೆ ಆಗಮಿಸಿದ್ದಾರೆ. ಭಕ್ತರನ್ನ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net