ವಿಷ ಕುಡಿದು ಪ್ರಿಯಕರನ ಮಡಿಲಲ್ಲೇ ರಕ್ತಕಾರಿ ಪ್ರಾಣಬಿಟ್ಟ ಪ್ರೇಯಸಿ! ಇವರಿಬ್ಬರ ಕಥೆ ಭಯಾನಕ

love case
Published on

ವಿಜಯಪುರ: ವಿಷ ಕುಡಿದು ವಿಲವಿಲ ಒದ್ದಾಡುತ್ತಾ ರಕ್ತಕಾರುತ್ತಿದ್ದ ಪ್ರೇಯಸಿಯನ್ನ ತೊಡೆಯ ಮೇಲೆ ಮಲಗಿಸಿಕೊಂಡು ಪ್ರಿಯಕರ ಸಂತೈಸುತ್ತಿದ್ದ.

ಕುರಿಗಾಯಿಗಳು ಆಸ್ಪತ್ರೆಗೆ ಕರೆದೊಯ್ಯುವಂತೆ ಹೇಳಿದರೂ ಅವರಿಗೆ ಕೈಮುಗಿದ ಪ್ರಿಯಕರ ಎಲ್ಲಿಗೂ ಹೋಗಲ್ಲ, ನಾವಿಬ್ಬರೂ ಒಟ್ಟಾಗಿ ಸಾಯುತ್ತೇವೆ ಎಂದು ಪ್ರೇಯಸಿಯ ಕೆನ್ನೆ ಸವರುತ್ತಲೇ ಇದ್ದ... ನೋಡನೋಡುತ್ತಿದ್ದಂತೆ ಪ್ರೇಯಸಿ ಅವನ ಮಡಿಲಲ್ಲೇ ಪ್ರಾಣಬಿಟ್ಟಳು... ಇಂತಹ ಭಯಾನಕ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಈ ಅಮಾನವೀಯ ಘಟನೆಯ ದೃಶ್ಯ ಸ್ಥಳೀಯರ ಮೊಬೈಲ್​ನಲ್ಲಿ ಸೆರೆಯಾಗಿದ್ದು, ವೈರಲ್​ ಆಗಿದೆ. ಇದನ್ನು ಓದಿರಿ ಮೂತ್ರ ವಿಸರ್ಜನೆ ಮಾಡುತ್ತಲೇ ಯುವಕರಿಬ್ಬರು ದುರಂತ ಸಾವು! ದೇವರೇ ಈ ಸಾವು ನ್ಯಾಯವೇ…

ಗಂಗೂರು ಗ್ರಾಮದ ಅಶೋಕ ಎಂಬುವರ ಪತ್ನಿ ರೇಣುಕಾ ಝಳಕಿ(36) ಮೃತ ದುರ್ದೈವಿ. ಅಶೋಕ ಮತ್ತು ರೇಣುಕಾ ಸಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಗಂಡ ಕೆಲಸದ ಮೇಲೆ ಕೇರಳಕ್ಕೆ ಹೋಗಿದ್ದ. ಈ ವೇಳೆ ಹಡಲಗೇರಿ ಗ್ರಾಮದ ಬಸವರಾಜ್ ಕಿಲಾರಹಟ್ಟಿ ಜತೆ ಸಲುಗೆ ಬೆಳೆಸಿಕೊಂಡಿದ್ದ ರೇಣುಕಾ, ಅಕ್ರಮ ಸಂಬಂಧ ಹೊಂದಿದ್ದಳು, ಬಸವರಾಜ್​ಗೂ ಬೇರೊಬ್ಬಳೊಂದಿಗೆ ಮದುವೆ ಆಗಿ 6 ಮಕ್ಕಳಿವೆ. ಇದನ್ನು ಓದಿರಿ 

ಬೇರೆ ಬೇರೆ ಮದುವೆಯಾಗಿದ್ದರೂ ಅನೈತಿಕ‌ ಸಂಬಂಧ ಹೊಂದಿದ್ದ ಜೋಡಿ ಮಂಗಳವಾರ ಬಿದಕುಂದಿ ಗ್ರಾಮದ ಹೊರವಲಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ವಿಷ ಸೇವಿಸಿದೆ. ಕುಡಿದ ಅಮಲಿನಲ್ಲಿದ್ದ ಬಸವರಾಜ್, ಕಡಿಮೆ ವಿಷ ಸೇವಿಸಿದ್ದು, ರೇಣುಕಾ ಹೆಚ್ಚು ವಿಷ ಕುಡಿದಿದ್ದಳು. ಅಸ್ವಸ್ಥಗೊಂಡ ಒದ್ದಾಡಿತ್ತಿದ್ದ ರೇಣುಕಾಳನ್ನು ತೊಡೆಯ ಮೇಲೆ ಮಲಗಿಸಿಕೊಂಡು ಪ್ರಿಯಕರ ಬಸವರಾಜ್ ಸಂತೈಸುತ್ತಿದ್ದ. ಪ್ರಿಯಕರನ ತೊಡೆ ಮೇಲೆಯೇ ಬಾಯಿಂದ ರಕ್ತಕಾರಿ ರೇಣುಕಾ ಒದ್ದಾಡುತ್ತಿದ್ದಳು. ಇವರಿಬ್ಬರ ಚೀರಾಟ ಕೇಳಿ ಸ್ಥಳಕ್ಕೆ ಬಂದ ಕುರಿಗಾಯಿಗಳು ಇದನ್ನ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ರೇಣುಕಾ ಸತ್ತಿದ್ದು, ಬಳಿಕ ಬಸವರಾಜ್​ನನ್ನು ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net