ಸ್ಫೋಟಕ ತುಂಬಿದ್ದ ಲಾರಿ ನಡುರಸ್ತೆಯಲ್ಲೇ ಪಂಕ್ಚರ್!

lorry
Published on

ಶಿವಮೊಗ್ಗ: ಭಾರಿ ಸ್ಫೋಟಕ ತುಂಬಿದ್ದ ಲಾರಿಯೊಂದು ಶನಿವಾರ ಬೆಳಗ್ಗೆ ಟಯರ್ ಪಂಕ್ಚರ್ ಆಗಿ ನಗರದ ಹೊರಭಾಗದ ಶೈನ್ ಹೋಟೆಲ್ ಸಮೀಪ ರಸ್ತೆ ಬದಿಯಲ್ಲೇ ಗಂಟೆಗಟ್ಟಲೆ ನಿಂತಿದ್ದು ಸ್ಥಳೀಯರ ಆತಂಕಕ್ಕೆ ಕಾರಣವಾಗಿತ್ತು.

ಕಾರ್ಕಳದಿಂದ ಹೆಬ್ರಿ, ಆಗುಂಬೆ ಮಾರ್ಗವಾಗಿ ಚಿತ್ರದುರ್ಗಕ್ಕೆ ತೆರಳುತ್ತಿದ್ದ ಸ್ಫೋಟಕ ತುಂಬಿದ್ದ ಲಾರಿ ಶಿವಮೊಗ್ಗಕ್ಕೆ ಬರುತ್ತಿದ್ದಂತೆ ಟಯರ್ ಪಂಕ್ಚರ್ ಆಗಿತ್ತು. ಚಾಲಕ ರಸ್ತೆಬದಿ ಪಂಕ್ಚರ್ ಶಾಪ್ ಬಳಿ ನಿಲ್ಲಿಸಿದ್ದ. ಈ ವೇಳೆ ಶಾಪ್‌ನವರು ಲಾರಿಯಲ್ಲಿ ಏನಿದೆ ಎಂಬುದನ್ನು ತಿಳಿಯದೆ ಪಂಕ್ಚರ್ ಹಾಕಲು ಮುಂದಾಗಿದ್ದರು. ಬಳಿಕ ಸ್ಫೋಟಕ ಇರುವುದು ತಿಳಿದು ಹೌಹಾರಿದರು.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಡಿವೈಎಸ್ಪಿ ಪ್ರಶಾಂತ್ ಮುನ್ನೊಳ್ಳಿ ಅವರು ದಾಖಲೆಗಳನ್ನು ಪರಿಶೀಲಿಸಿದರು. ಈ ಬಗ್ಗೆ ಎಸ್ಪಿ ಬಿ.ಎಂ.ಲಕ್ಷ್ಮೀಪ್ರಸಾದ್ ಅವರ ಗಮನಕ್ಕೂ ತಂದರು. ಪರವಾನಗಿ ಸೇರಿ ಸುರಕ್ಷತಾ ಕ್ರಮಗಳನ್ನು ಕಾನೂನು ಪ್ರಕಾರವೇ ಪಾಲನೆ ಮಾಡಿದ್ದರಿಂದ ಲಾರಿಯನ್ನು ಬಿಟ್ಟು ಕಳುಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net