ಗೃಹೋಪಯೋಗಿ ವಸ್ತು ತುಂಬಿದ್ದ ಲಾರಿ ವಶ

14 HUTRIDURGA
Published on

ಹುತ್ರಿದುರ್ಗ: ಮತದಾರರಿಗೆ ಹಂಚಲು ತರಿಸಿದ್ದರು ಎನ್ನಲಾದ ಗೃಹಪಯೋಗಿ ವಸ್ತುಗಳನ್ನು ತುಂಬಿದ ಲಾರಿಯನ್ನು ಕುಣಿಗಲ್ ತಾಲೂಕಿನ ಯಲಿಯೂರಿನಲ್ಲಿ ಮಂಗಳವಾರ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶಾಸಕ ಡಾ.ರಂಗನಾಥ್ ಹಾಗೂ ಸಂಸದ ಡಿ.ಕೆ.ಸುರೇಶ್ ಭಾವಚಿತ್ರವಿದ್ದ ಗೃಹಪಯೋಗಿ ವಸ್ತುಗಳ ಬಾಕ್ಸ್‌ಗಳನ್ನು ಲಾರಿಯಿಂದ ಕೆಳಗಿಳಿಸುವಾಗ ಕುಣಿಗಲ್ ಸಿಪಿಐ ಗುರುಪ್ರಸಾದ್ ಹಾಗೂ ಹುತ್ರಿದುರ್ಗ ಉಪ ತಹಸೀಲ್ದಾರ್ ಗೋವಿಂದರಾಜು ಸ್ಥಳ ಪರಿಶೀಲಿಸಿದರು.

ಈ ವೇಳೆ ಶಾಸಕ ಡಾ.ರಂಗನಾಥ್ ಬೆಂಬಲಿಗರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಚುಣಾವಣೆಯಲ್ಲಿ ಮತದಾರರಿಗೆ ಆಮಿಷವೊಡ್ಡಲು ಗ್‌ಟಿ ಬಾಕ್ಸ್‌ಗಳನ್ನು ಉಡುಗೊರೆಯಾಗಿ ನೀಡುತ್ತಿರುವ ಶಾಸಕ ಡಾ.ರಂಗನಾಥ್ ವಿರುದ್ಧ ಕ್ರಮ ಕೈಗೊಳ್ಳುವಂತೆ ತಾಲೂಕು ಜೆಡಿಎಸ್ ಮುಖಂಡರು ತಹಸೀಲ್ದಾರ್‌ಗೆ ದೂರು ನೀಡಿದ್ದಾರೆ.

ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿಯಾಗಿ ಕಾರ್ಯಚರಣೆ ನಡೆಸಿ ಗೃಹ ಬಳಕೆ ವಸ್ತುಗಳನ್ನು ತುಂಬಿದ್ದ ಲಾರಿ ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳು ದೂರು ದಾಖಲಿಸಿದ್ದಾರೆ. ಮುಂದಿನ ಕ್ರಮಕ್ಕಾಗಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಮಹಾಬಲೇಶ್ವರ್, ತಹಸೀಲ್ದಾರ್ ಕುಣಿಗಲ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net