ಹೊತ್ತಿ ಉರಿದ ಸಕ್ಕರೆ ತುಂಬಿದ್ದ ಲಾರಿ

07 hanur 5
ತಮಿಳುನಾಡಿನ ಬರಗೂರು ಸಮೀಪದ ಅರಣ್ಯ ಪ್ರದೇಶದ ರಸ್ತೆಯಲ್ಲಿ ಹೊತ್ತಿ ಉರಿದ ಸಕ್ಕರೆ ತುಂಬಿದ ಲಾರಿ.
Published on

ಹನೂರು: ತಾಲೂಕಿನ ಗಡಿ ಭಾಗದಿಂದ ತಮಿಳುನಾಡಿಗೆ ಸಕ್ಕರೆ ಮೂಟೆಗಳನ್ನು ಹೊತ್ತೊಯ್ಯುತ್ತಿದ್ದ ವೇಳೆ ಸೋಮವಾರ ರಾತ್ರಿ ತಮಿಳುನಾಡಿನ ಬರಗೂರಿನ ಬಳಿ ಬೆಂಕಿ ಕಾಣಿಸಿಕೊಂಡು ಲಾರಿಯೊಂದು ಆಹುತಿಯಾಗಿದೆ.

ತಾಲೂಕಿನ ಬಂಡಳ್ಳಿ ಗ್ರಾಮದ ಸೈಯದ್ ಸಲ್ಮಾನ್ ಎಂಬುವರಿಗೆ ಸೇರಿದ ಈ ಲಾರಿಯಲ್ಲಿ ಚಾಲಕ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೊಪ್ಪದಿಂದ ತಮಿಳುನಾಡಿನ ತಿರುನೈವೇಲಿಗೆ 40 ಟನ್ ಸಕ್ಕರೆ ತುಂಬಿಕೊಂಡು ತೆರಳುತ್ತಿದ್ದರು. ಈ ವೇಳೆ ಬರಗೂರು ಸಮೀಪದ ಅಡಿಯಾರ್ ಅರಣ್ಯ ಪ್ರದೇಶದ ರಸ್ತೆಯಲ್ಲಿ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಗಾಬರಿಗೊಂಡ ಚಾಲಕ ಕೆಳಗಿಳಿದಿದ್ದು, ನೋಡನೋಡುತ್ತಲೇ ಲಾರಿಯು ಸಕ್ಕರೆ ಸಮೇತ ಬೆಂಕಿಗೆ ಆಹುತಿಯಾಗಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net