ಚಿತ್ರದುರ್ಗ ಜಿಲ್ಲೇಲಿ ಮತ್ತೆ ಭೀಕರ ಅಪಘಾತ: ಸ್ಥಳದಲ್ಲೇ ನಾಲ್ವರ ದುರ್ಮರಣ, ವಾರದ ಹಿಂದೆಯೂ ನಾಲ್ವರು ಸತ್ತಿದ್ದರು

hiriyuru lorry accident
Published on

ಚಿತ್ರದುರ್ಗ: ಜಿಲ್ಲೆಯಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, ಮತ್ತೆ ನಾಲ್ವರು ದುರ್ಮರಣಕ್ಕೀಡಾಗಿದ್ದಾರೆ.

ಹಿರಿಯೂರು ತಾಲೂಕಿನ ಆಲೂರು ಗ್ರಾಮದ ಬಳಿ ಸೋಮವಾರ ನಸುಕಿನಲ್ಲಿ ಸರಣಿ ಅಪಘಾತವಾಗಿದ್ದು, ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದಾರೆ. ಗದಗ ಮೂಲದ ಹನುಮಪ್ಪ(30), ಪ್ರಶಾಂತ(28), ಗುರಪ್ಪ(30) ಮತ್ತು ರಮೇಶ(30) ಮೃತರು. ಈರುಳ್ಳಿ ತುಂಬಿದ್ದ ಲಾರಿ ಹಾಗೂ ಕ್ಯಾಂಟರ್ ನಡುವೆ ಡಿಕ್ಕಿಯಾಗಿದ್ದು, ಅಪಘಾತದ ರಭಸಕ್ಕೆ ಎರಡೂ ಲಾರಿಗಳು ಪಲ್ಟಿಯಾಗಿವೆ. ಲಕ್ಷಾಂತರ ಮೌಲ್ಯದ ಈರುಳ್ಳಿ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಲಾರಿ ಪಲ್ಟಿ ಹಿನ್ನೆಲೆ, ಹಿಂಬದಿ ಚಲಿಸುತ್ತಿದ್ದ 1 ಕಾರು, 6 ಲಾರಿಗಳು ಸರಣಿ ಅಪಘಾತಕ್ಕೀಡಾಗಿದ್ದು, 10 ಮಂದಿ ಗಾಯಗೊಂಡಿದ್ದಾರೆ.

ಚಿತ್ರದುರ್ಗ ತಾಲೂಕಿನ ದೊಡ್ಡಸಿದ್ದವ್ವನಹಳ್ಳಿ ಬಳಿ ಕಳೆದವಾರ ಲಾರಿ ಮತ್ತು ಗ್ಯಾಸ್​ ಟ್ಯಾಂಕರ್​ ನಡುವೆ ಸಂಭವಿಸಿದ್ದ ಅಪಘಾತ.
ಚಿತ್ರದುರ್ಗ ತಾಲೂಕಿನ ದೊಡ್ಡಸಿದ್ದವ್ವನಹಳ್ಳಿ ಬಳಿ ಕಳೆದವಾರ ಲಾರಿ ಮತ್ತು ಗ್ಯಾಸ್​ ಟ್ಯಾಂಕರ್​ ನಡುವೆ ಸಂಭವಿಸಿದ್ದ ಅಪಘಾತ.

ವಾರದ ಹಿಂದೆಯೂ ನಾಲ್ವರು ಸತ್ತಿದ್ದರು: ಡಿ.4ರ ಬೆಳಗಿನ ಜಾವ ಚಿತ್ರದುರ್ಗ ಜಿಲ್ಲೆಯ ದೊಡ್ಡಸಿದ್ದವನಹಳ್ಳಿ ಬಳಿ ಈರುಳ್ಳಿ ತುಂಬಿದ್ದ ಲಾರಿಗೆ ಗ್ಯಾಸ್​ ಟ್ಯಾಂಕರ್​ ಡಿಕ್ಕಿ ಹೊಡೆದು ಈ ದುರ್ಘಟನೆಯಲ್ಲೂ ನಾಲ್ವರು ಮೃತಪಟ್ಟಿದ್ದರು. ಅಪಘಾತದಲ್ಲಿ ರಾಯಚೂರು ಮೂಲದ ಹುಲುಗಪ್ಪ, ಕುಷ್ಟಗಿ ಮೂಲದ ಮಂಜುನಾಥ, ವಿಜಯಪುರ ಮೂಲದ ಕ್ಲೀನರ್ ಸಂಜಯ್ ಹಾಗೂ ರೋಣ ಮೂಲದ ಚಾಲಕ ಶರಣಪ್ಪ ಎಂಬುವರು ಮೃತಪಟ್ಟಿದ್ದರು. ಗದಗ ಜಿಲ್ಲೆ ರೋಣದಿಂದ ಬೆಂಗಳೂರಿಗೆ ಈರುಳ್ಳಿ ಸಾಗಿಸುತ್ತಿದ್ದ ಲಾರಿ ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ಬಳಿ ಪಂಚರ್​ ಆಗಿದ್ದು. ಹಾಗಾಗಿ ಹೆದ್ದಾರಿ ಪಕ್ಕದಲ್ಲೇ ಲಾರಿಯನ್ನ ನಿಲ್ಲಿಸಿ, ಇವರೆಲ್ಲರೂ ಪಂಚರ್​ ಹಾಕುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಗ್ಯಾಸ್​ ಟ್ಯಾಂಕರ್​, ಈರುಳ್ಳಿ ತುಂಬಿದ್ದ ಲಾರಿಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಪಂಚರ್​ ಹಾಕುತ್ತಿದ್ದ ನಾಲ್ವರೂ ಸ್ಥಳದಲ್ಲೇ ಮೃತಪಟ್ಟಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net