

ಲಂಡನ್: ಇನ್ನು ಆರು ವಾರಗಳಲ್ಲಿ ಚೀನಾ ಬ್ಯಾಂಕ್ಗಳಿಗೆ 100 ಮಿಲಿಯನ್ ಅಮೆರಿಕನ್ ಡಾಲರ್ಗಳನ್ನು ಪಾವತಿ ಪಾಡಬೇಕು ಎಂದು ಲಂಡನ್ ನ್ಯಾಯಾಲಯ ರಿಲಯನ್ಸ್ ಗ್ರೂಪ್ನ ಚೇರ್ಮನ್ ಅನಿಲ್ ಅಂಬಾನಿಯವರಿಗೆ ಸೂಚನೆ ನೀಡಿದೆ.
ಚೀನಾದ ಮೂರು ಬ್ಯಾಂಕ್ಗಳಿಂದ 2012ರಲ್ಲಿ 680 ಮಿಲಿಯನ್ ಡಾಲರ್ಗಳನ್ನು ಸಾಲ ಮಾಡಿದ್ದ ಅನಿಲ್ ಅಂಬಾನಿಯವರು ಅದನ್ನು ಮರುಪಾವತಿ ಮಾಡಲು ವಿಫಲರಾದ ಹಿನ್ನೆಲೆಯಲ್ಲಿ ಬ್ಯಾಂಕ್ಗಳು ಲಂಡನ್ ಕೋರ್ಟ್ನಲ್ಲಿ ಮೊಕದ್ದಮೆ ಹೂಡಿದ್ದವು.
ಪ್ರಕರಣದ ವಿಚಾರಣೆ ನಡೆಸುತ್ತಿರುವ ಕೋರ್ಟ್ ಶುಕ್ರವಾರ ಈ ಆದೇಶ ನೀಡಿದ್ದು, ಸಾಲದ ಒಪ್ಪಂದದ ಅನ್ವಯ ಚೀನಾದ ಬ್ಯಾಂಕ್ಗಳು ಅನಿಲ್ ಅಂಬಾನಿಯವರಿಂದ 680 ಡಾಲರ್ಗಳನ್ನು ಹಿಂಪಡೆಯಬಹುದು ಎಂದು ತಿಳಿಸಿದೆ.
ಅನಿಲ್ ಅಂಬಾನಿ ಈಗ ಶ್ರೀಮಂತ ಉದ್ಯಮಿಯಾಗಿ ಉಳಿದಿಲ್ಲ. ಅವರು ದಿವಾಳಿಯಯಾಗಿದ್ದಾರೆ ಎಂದು ಹೇಳಿರುವ ಅವರ ಪರ ವಕೀಲರ ವಾದದಿಂದ ನನಗೆ ಸಮಾಧಾನ ಆಗಿಲ್ಲ. ಅವರ ಪರ ವಾದ ಮಂಡನೆ ಮಾಡಿದ ವಕೀಲರ ಮಾತಿನಲ್ಲಿ ಪಾರದರ್ಶಕತೆ ಇರಲಿಲ್ಲ ಎಂದು ನ್ಯಾಯಾಧೀಶ ವಾಕ್ಸ್ಮನ್ ಹೇಳಿದ್ದಾಗಿ ವರದಿಯಾಗಿದೆ. (ಏಜೆನ್ಸೀಸ್)