ಲಿವ್ ಇನ್ ಸಂಬಂಧ ಕೊಲೆಯಲ್ಲಿ ಅಂತ್ಯ

5-6797ccaf426f9
Published on

ನವದೆಹಲಿ: ದೆಹಲಿಯ ಘಾಜಿಪುರದಲ್ಲಿ ಸೂಟ್​ಕೇಸ್​ವೊಂದರಲ್ಲಿ ಸುಟ್ಟ ದೇಹವೊಂದು ಪತ್ತೆಯಾಗಿದ್ದು, ಇದಕ್ಕೆ ಲಿವ್- ಇನ್ ಸಂಬಂಧ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಸೂಟ್​ಕೇಸ್ ಪತ್ತೆಯಾದ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿದ ನಂತರ ಕ್ಯಾಬ್ ಡ್ರೖೆವರ್ ಅಮಿತ್ ಮತ್ತು ಆತನ ಸ್ನೇಹಿತ ಅನುಜ್ ಕುಮಾರ್ ಎಂಬುವವರನ್ನು ಬಂಧಿಸಲಾಗಿದೆ. 22 ವರ್ಷದ ಸೋದರಸಂಬಂಧಿ ಶಿಲ್ಪಾ ಪಾಂಡೆ ಜತೆ ಅಮಿತ್ ಒಂದು ವರ್ಷದಿಂದ ಒಟ್ಟಿಗೆ ವಾಸವಾಗಿದ್ದ. ಶಿಲ್ಪಾ ಆತನನ್ನು ಮದುವೆಯಾಗಲು ಬಯಸಿದ್ದಳು. ಆದರೆ ಅಮಿತ್ ದೂರವಾಗಲು ಯತ್ನಿಸುತ್ತಿದ್ದ. ಶನಿವಾರ ರಾತ್ರಿ ಮದ್ಯದ ನಶೆಯಲ್ಲಿದ್ದ ಅಮಿತ್, ಶಿಲ್ಪಾ ಜತೆ ಜಗಳ ಮಾಡಿದ್ದಾನೆ. ಕೋಪದ ಭರದಲ್ಲಿ ಅವಳನ್ನು ಉಸಿರುಗಟ್ಟಿಸಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net