ಕೆಎಸ್​ಆರ್​ಟಿಸಿ ಬಸ್​ನಲ್ಲಿ ಲ್ಯಾಪ್​ಟಾಪ್​, ಮೊಬೈಲ್​ ಕಳವು

shimoga ksrtc bus stop
Published on

ಶಿವಮೊಗ್ಗ: ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದಲ್ಲಿ ಲ್ಯಾಪ್​ಟಾಪ್​ ಕಳ್ಳರ ಹಾವಳಿ ಮುಂದುವರಿದಿದ್ದು, ಕಳೆದ ಮೂರು ದಿನಗಳ ಹಿಂದೆ ಬಸ್ಸಿನಲ್ಲಿ ಇರಿಸಿದ್ದ ಲ್ಯಾಪ್​ಟಾಪ್​ ಬ್ಯಾಗ್​ ಕಳ್ಳತನ ಮಾಡಲಾಗಿದೆ.

ಮಂಡ್ಯ ಜಿಲ್ಲೆ ನಾಗಮಂಗಲದ ವಿದ್ಯಾರ್ಥಿ ಗಗನ್​ ಅವರ ಲ್ಯಾಪ್​ಟಾಪ್​ ಕಳ್ಳತನವಾಗಿದೆ. ಗಗನ್​ ಅವರು ಶಿರಸಿಯಿಂದ ಚನ್ನರಾಯಪಟ್ಟಣಕ್ಕೆ ತೆರಳುವ ಬಸ್ಸಿನಲ್ಲಿ ಶಿವಮೊಗ್ಗಕ್ಕೆ ಆಗಮಿಸಿದ್ದರು. ಬಸ್​ ಶಿವಮೊಗ್ಗ ನಿಲ್ದಾಣಕ್ಕೆ ಬಂದಾಗ ಗಗನ್​ ಬಸ್ಸಿನಿಂದ ಇಳಿದು ಶೌಚಗೃಹಕ್ಕೆ ತೆರಳಿದ್ದರು. ಹಿಂತಿರುಗಿ ಬಂದಾಗ ಬಸ್ಸಿನಲ್ಲಿ ಲಗೇಜ್​ ಬ್ಯಾಗ್​ ಮಾತ್ರ ಇದ್ದು, ಲ್ಯಾಪ್​ಟಾಪ್​ ಬ್ಯಾಗ್​ ನಾಪತ್ತೆಯಾಗಿತ್ತು. ಬ್ಯಾಗ್​ನಲ್ಲಿದ್ದ ಲ್ಯಾಪ್​ಟಾಪ್​, ಮೊಬೈಲ್​, ಚಾರ್ಜರ್, ಪವರ್​ ಬ್ಯಾಂಕ್​, ಹೆಡ್​ಫೋನ್​, ಡೇಟಾ, ಪುಸ್ತಕಗಳು ಕಳ್ಳತನವಾಗಿವೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net