

ಕೋಲಾರ: ಮದುವೆಯಾಗಿ, ನೂರು ಕನಸು ಹೊತ್ತು ಗಂಡನ ಮನೆ ಸೇರಿದ್ದ ಯುವತಿ, ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮುಳಬಾಗಿಲು ಪಟ್ಟಣದ ಹೈದರಿ ನಗರದಲ್ಲಿ ದುರ್ಘಟನೆ ನಡೆದಿದ್ದು, ತಸ್ಮಿಯಾಖಾನಂ (22) ಮೃತ ಗೃಹಿಣಿ. ಇವರು ಬೆಂಗಳೂರಿನ ಕೆ.ಆರ್.ಪುರಂನ ಗಾಂಧಿನಗರದ ಶೋಯಬ್ ಎಂಬಾತನೊಂದಿಗೆ ವಿವಾಹವಾಗಿತ್ತು.
ಆದರೆ ವರದಕ್ಷಿಣೆಗಾಗಿ ಈಕೆಯನ್ನು ಗಂಡನಮನೆಯವರು ತುಂಬ ಹಿಂಸಿಸಿದ್ದಾರೆ. ಪತಿ ಮನೆಯವರ ಕಿರುಕುಳ ತಾಳಲಾರದೆ ತಸ್ಮಿಯಾಖಾನಂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಳಬಾಗಿಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)