ಬೈಕ್​ ಅಪಘಾತದಲ್ಲಿ ಅಪ್ಪ, ಮೂರು ವರ್ಷದ ಮಗಳು ಸಾವು

Accident 8 June 20
Published on

ದಾವಣಗೆರೆ: ಬೈಕ್​ಗಳ ಮುಖಾಮುಖಿ ಡಿಕ್ಕಿಯಾಗಿ ತಂದೆ ಮತ್ತು ಮೂರು ವರ್ಷದ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದ ದುರ್ಘಟನೆ ಪಟ್ಟಣದ ಕೈಗಾರಿಕಾ ಪ್ರದೇಶದ ಸಮೀಪ ನಡೆದಿದೆ.

ತುರ್ಚಗಟ್ಟ ನಿವಾಸಿ ಸಿದ್ದೇಶ್​ (30) ಮತ್ತವರ ಮೂರು ವರ್ಷದ ಮಗಳು ಪ್ರಿಯಾಂಕಾ ಮೃತರು. ಇವರು ಬೈಕ್​​ನಲ್ಲಿ ತುರ್ಚಗಟ್ಟದಿಂದ ದಾವಣಗೆರೆಗೆ ಬೈಕ್​ನಲ್ಲಿ ಹೊರಟಿದ್ದರು. ಇನ್ನೊಂದು ಬೈಕ್​ನಲ್ಲಿದ್ದ ಇಬ್ಬರೂ ಗಾಯಗೊಂಡಿದ್ದಾರೆ. ಹದಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net