ಜೀಸಸ್.. ಹೆಲ್ಪ್ ಮಿ... ಎಂದು ಕಣ್ಣೀರಿಟ್ಟ ಶಾಸಕ ಮಹೇಶ್! ಹಳೇ ವಿಡಿಯೋ ಹರಿಬಿಟ್ಟು ಕಾಲೆಳೆದ ನೆಟ್ಟಿಗರು

ಹಳೇ ವಿಡಿಯೋ ವೈರಲ್​: ವಿ ಬಿಜೆಪಿ ಸೇರಲಿರುವ ಶಾಸಕ ಎನ್.ಮಹೇಶ್​ರ ಕಾಲೆಳೆದ ನೆಟ್ಟಿಗರು..! - youtube
Published on

ಕೊಳ್ಳೇಗಾಲ: ಬಿಜೆಪಿ ಸೇರ್ಪಡೆ ಹೊಸ್ತಿಲಿನಲ್ಲಿರುವ ಬಿಎಸ್ಪಿ ಉಚ್ಚಾಟಿತ ಶಾಸಕ ಎನ್.ಮಹೇಶ್ ಚುನಾವಣೆಗೂ ಮುನ್ನ ಚರ್ಚ್​ವೊಂದರಲ್ಲಿ ಜನರ ಮುಂದೆ ಗೆಲುವಿಗಾಗಿ ಜೀಸಸ್ ಮೊರೆ‌ ಹೋಗಿದ್ದ ವಿಡಿಯೋ ತುಣುಕನ್ನು ನೆಟ್ಟಿಗರು ಹರಿಬಿಟ್ಟು ಟೀಕಿಸಿದ್ದಾರೆ.

'ಓ ಜೀಸಸ್ ಪ್ಲೀಸ್ ಹೆಲ್ಪ್ ಮಿ.. ಪ್ಲೀಸ್ ಹೆಲ್ಪ್ ಮಿ..' ಎಂದು ಮಹೇಶ್​ ಗೋಳಾಡುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್ ಆಗಿದೆ. 'ಎನ್.ಮಹೇಶ್ ಕೂಡ ಡ್ರಾಮಾಬಾಝೇ. ಓದಿದವರು, ಸೆನ್ಸಿಬಲ್ ಅನ್ಕೊಂಡಿದ್ದೆವು, ಯಾರನ್ನು ನಂಬೋದು, ಯಾರನ್ನು ಬಿಡೋದು...' ಎಂದು ನೆಟ್ಟಿಗರು ಕಮೆಂಟ್ಸ್​ ಮಾಡುತ್ತಿದ್ದಾರೆ.

'ರಾಜಕಾರಣ ಒಬ್ಬ ಮನುಷ್ಯನನ್ನು ಇಷ್ಟು ದುರ್ಬಲ ಮಾಡುತ್ತಾ? ದೇವರಿಗೆ ಮೊರೆ ಇಡೋದು ತಪ್ಪೇನಿಲ್ಲ. ಸಾರ್ವಜನಿಕವಾಗಿ ಹೀಗೆ ಚೀರಾಡೋದಾ? ನಾವು ನೋಡಿದ್ದ ಅಂಬೇಡ್ಕರ್​ವಾದಿ ಎನ್.ಮಹೇಶ್ ಇವರೇನಾ?' ಎಂದು ವ್ಯಂಗ್ಯ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net